ಹಿರಾ ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ
Update: 2025-07-11 23:20 IST
ಉಳ್ಳಾಲ : ಹಿರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭ ಶುಕ್ರವಾರ ನಡೆಯಿತು. ವಿದ್ಯಾರ್ಥಿ ನಾಯಕ ಬಾರಿಝ್ ಅಲಿ, ಉಪ ನಾಯಕಿ ರಿಹಾನ ಮೊಹಮ್ಮದ್ ಅಶ್ರಫ್ ಹಾಗೂ ವಿವಿಧ ವಿಭಾಗಗಳ ಮಂತ್ರಿ ಉಸ್ತುವಾರಿ ಮಂತ್ರಿ , ಸಹಾಯಕ ಮಂತ್ರಿಗಳನ್ನು ಒಳಗೊಂಡ ತಂಡವು ಅತಿಥಿಗಳನ್ನು ಸಭಾಂಗಣಕ್ಕೆ ಕರೆತಂದರು.
ಕಾರ್ಯಕ್ರಮ ದಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಅಬ್ದುಲ್ ಕರೀಂ, ಶಾಲಾ ಸಂಚಾಲಕ ಅಬ್ದುಲ್ ರಹಮಾನ್ ,ಹಿರಾ ವಿಮೆನ್ಸ್ ಕಾಲೇಜಿನ ಸಂಚಾಲಕ ರಹಮತುಲ್ಲಾ ಆಡಳಿತಾಧಿಕಾರಿ ಜಾಕಿರ್ ಹುಸೇನ್ ರಕ್ಷಕ ಶಿಕ್ಷಕ ಸಂಘದ ಸದಸ್ಯ ಇಫ್ತಿಖಾರ್ ಅಹಮದ್ ಶಾಲಾ ಮುಖ್ಯ ಶಿಕ್ಷಕ ರೀನಾ ವೇಗಸ್, ಆಯಿಷಾ ಅಫ್ರಿನ್ ಉಪಸ್ಥಿತರಿದ್ದರು.
ಶಾಲಾ ನಾಯಕರು ಪ್ರಮಾಣವಚನ ಸ್ವೀಕರಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದರು.