×
Ad

ಅಲೋಶಿಯಸ್ ವಿವಿಯಲ್ಲಿ ರಕ್ತದಾನ ಶಿಬಿರ

Update: 2025-07-12 20:02 IST

ಮಂಗಳೂರು, ಜು.12: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಘಟಕ , ಕೆಎಂಸಿ ಅತ್ತಾವರ ಮತ್ತು ಪೌಲೋಸ್ ಮೆಮೋರಿಯಲ್ ಪ್ರಾವಿಡೆನ್ಸ್ ಸಹಯೋಗದೊಂದಿಗೆ ಶನಿವಾರ ವಿವಿಯ ಆಡಿಟೋರಿಯಂನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎನ್‌ಎಸ್‌ಎಸ್ ಸ್ವಯಂಸೇವಕ ಪೌಲೋಸ್ ಬೆಂಜಮಿನ್ ಅವರ ಸ್ಮರಣಾರ್ಥ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ರಕ್ತದಾನದಲ್ಲಿ 160 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅತ್ತಾವರದ ಕೆಎಂಸಿಯ ರಕ್ತ ಕೇಂದ್ರದ ನಿರ್ದೇಶಕಿ ಡಾ.ದೀಪಾಅಡಿಗ ಭಾಗವಹಿಸಿದ್ದರು. ಪೌಲ್ಸ್ ಮೆಮೋರಿಯಲ್ ಪ್ರಾವಿಡೆನ್ಸ್ ಸದಸ್ಯ ಜೀವನ್, ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೆಸಾ ಪೌಲೋಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕಿ ಬಿನ್ನಿ ಚಾನ್ ಸ್ವಾಗತಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಕ್ಯಾರಲ್ ಪಿರೇರಾ ವಂದಿಸಿದರು. ಎನ್‌ಎಸ್‌ಎಸ್ ಕಾರ್ಯದರ್ಶಿ ಸನಾತನಿ ಕಾರ್ಯಕ್ರಮ ನಿರ್ವಹಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News