ಕರ್ಣಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ರಾಘವೇಂದ್ರ ಭಟ್ ನೇಮಕ
ರಾಘವೇಂದ್ರ ಭಟ್
ಮಂಗಳೂರು, ಜು.14: ಕರ್ಣಾಟಕ ಬ್ಯಾಂಕ್‌ನ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಸಿಇಒ ಆಗಿ ಹಿರಿಯ ಬ್ಯಾಂಕರ್ ರಾಘವೇಂದ್ರ ಎಸ್. ಭಟ್ ಅವರನ್ನು ನೇಮಕ ಮಾಡಲಾಗಿದೆ.
ರಾಘವೇಂದ್ರ ಭಟ್ ಈ ಹಿಂದೆ ಕರ್ಣಾಟಕ ಬ್ಯಾಂಕ್ ಲಿ.ನಲ್ಲಿ 4 ದಶಕಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಸಿಒಒ ಸಹಿತ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು.
ಕರ್ಣಾಟಕ ಬ್ಯಾಂಕ್‌ಗೆ ರಾಘವೇಂದ್ರ ಭಟ್ ಅವರನ್ನು ಎಂಡಿ ಮತ್ತು ಸಿಇಒ ಆಗಿ ಸ್ವಾಗತಿಸಲು ನಮಗೆ ಸಂತೋಷವಾಗಿದೆ. ಅವರ ಅನುಭವ ಮತ್ತು ಪರಿಣತಿಯ ಸಂಪತ್ತು ಬ್ಯಾಂಕ್‌ನ ನಿರಂತರ ಬೆಳವಣಿಗೆ ಮತ್ತು ಯಶಸ್ಸಿಗೆ ಕಾರಣವಾಗಲಿದೆ. ಗ್ರಾಹಕರು ಮತ್ತು ಷೇರುದಾರರಿಗೆ ಮೌಲ್ಯಯುತ ಸೇವೆ ತಲುಪಿಸುವ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಬ್ಯಾಂಕ್‌ನ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಲು ನನಗೆ ಹೆಮ್ಮೆಯಿದೆ. ಬ್ಯಾಂಕ್ ಶತಮಾನಕ್ಕೂ ಹೆಚ್ಚು ಕಾಲ ನಂಬಿಕೆ ಮತ್ತು ಸದ್ಭಾವನೆಯನ್ನು ಹೊಂದಿದೆ. ಅದನ್ನು ಮತ್ತಷ್ಟು ಬೆಳೆಸಲು ಹಾಗೂ ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ರಾಘವೇಂದ್ರ ಭಟ್ ತಿಳಿಸಿದ್ದಾರೆ.