×
Ad

ಮದ್ರಸ ಶಿಕ್ಷಕರಿಗೆ ಗೌರವಧನ: ಸ್ಪೀಕರ್ ಯುಟಿ ಖಾದರ್‌ರನ್ನು ಭೇಟಿ ಮಾಡಿದ ಸಮಸ್ತ ಮುಅಲ್ಲಿಂ ಒಕ್ಕೂಟ

Update: 2025-07-14 23:13 IST

ಮಂಗಳೂರು: ರಾಜ್ಯದ ಮದ್ರಸಗಳಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಮುಅಲ್ಲಿಮರಿಗೆ (ಮದ್ರಸ ಶಿಕ್ಷಕರಿಗೆ) ಸರಕಾರದಿಂದ ಗೌರವಧನ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಸ್ತ ಮುಅಲ್ಲಿಂ ಒಕ್ಕೂಟದ ನಿಯೋಗವು ಇತ್ತೀಚೆಗೆ ಸ್ಪೀಕರ್ ಯು.ಟಿ. ಖಾದರ್‌ರನ್ನು ಅವರ ಮಂಗಳೂರು ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿತು.

ಮದ್ರಸದ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಕೊಡುಗೆಗಳು, ಅವರಿಗೆ ಗೌರವಧನ ನೀಡುವ ಮೂಲಕ ಸಮಾಜದಲ್ಲಿ ಅವರ ಪಾತ್ರವನ್ನು ಇನ್ನಷ್ಟು ಬಲಪಡಿಸುವ ಹಾಗೂ ಮದ್ರಸ ಶಿಕ್ಷಕರ ಕಲ್ಯಾಣ ಮತ್ತವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.

ನಿಯೋಗದಲ್ಲಿ ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಸುದ್ದೀನ್ ದಾರಿಮಿ ಪಮ್ಮಲೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ, ಎಸ್ಕೆಎಸೆಸ್ಸೆಫ್ ಕೇಂದ್ರೀಯ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಸಮಸ್ತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳಾದ ಅಶ್ರಫ್ ಫೈಝಿ ಬೆಳ್ತಂಗಡಿ, ಅಬ್ದುಲ್ ರಝಾಕ್ ಮದನಿ ಸುರತ್ಕಲ್, ಸಿ.ಎಚ್. ಇಬ್ರಾಹಿಂ ಮುಸ್ಲಿಯಾರ್ ಸಾಲೆತ್ತೂರು, ಮುಸ್ತಫಾ ಫೈಝಿ ಮಿತ್ತಬೈಲು, ಫಝಲ್ ರಹ್ಮಾನ್ ಮುಸ್ಲಿಯಾರ್ ಮಂಗಳೂರು, ಖಾಸಿಂ ಅರ್ಷದಿ ಫರಂಗಿಪೇಟೆ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News