ಮಂಗಳೂರು: ನಾಗರ ಪಂಚಮಿ ಆಚರಣೆ
Update: 2025-07-29 18:42 IST
ಮಂಗಳೂರು, ಜು.29: ನಾಗರ ಪಂಚಮಿ ಹಬ್ಬವನ್ನು ಸಂಭ್ರಮೋತ್ಸಾದಿಂದ ಎಲ್ಲಡೆ ಮಂಗಳವಾರ ಆಚರಿಸಲಾಯಿತು.
ಪ್ರಸಿದ್ಧ ನಾಗ ಕ್ಷೇತ್ರಗಳಲ್ಲಿ ಒಂದಾಗಿರುವ ಸುಬ್ರಹ್ಮಣ್ಯ ದೇವಸ್ಥಾನ , ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ನಗರದ ಶ್ರೀ ಕ್ಷೇತ್ರ ಮಂಗಳಾದೇವಿ, ಕದ್ರಿ, ಶರವು, ಉರ್ವ ಮಾರಿಯಮ್ಮ ಕ್ಷೇತ್ರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ನಾಗರ ಪಂಚಮಿಯ ಆಚರಣೆ ಸಂಪ್ರದಾಯದಂತೆ ನೆರವೇರಿತು.
ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲಬನಗಳಲ್ಲಿ ನಾಗರಪಂಚಮಿಯನ್ನು ಆಚರಿಸಲಾಗಿದೆ.
ನಾಗರ ಪಂಚಮಿ ಅಂಗವಾಗಿ ನಾಗ ಸನ್ನಿದಿಯಲ್ಲಿ ನಾಗನಿಗೆ ವಿಶೇಷ ಜಲಾಭಿಷೇಕ, ಸೀಯಾಳಾಭಿಷೇಕ, ಹಾಲು ಅಭಿಷೇಕ, ಕಲ್ಪೋಕ್ತ ಪೂಜೆ, ಕಲಶ ಪೂಜೆ, ಮಹಾಪಂಚಾಮೃತ ಅಭಿಷೇಕ, ವಿಶೇಷ ಅಷ್ಟೋತ್ತರ ಅರ್ಚನೆ, ಸಹಸ್ರನಾಮಾರ್ಚನೆ ಸೇವೆ, ನೈವೇದ್ಯ ಸೇವೆ, ನಾಗರ ಪಂಚಮಿಯ ವಿಷೇಷ ಮಹಾಪೂಜೆ , ನಾಗತಂಬಿಲ , ಅನ್ನ ಸಂತರ್ಪಣೆ ನಡೆಯಿತು.