ಪುನರ್ವಸತಿ ಕೇಂದ್ರದಿಂದ ಯುವಕ ಕಾಣೆ
Update: 2025-07-29 18:43 IST
ಮಂಗಳೂರು, ಜು.29: ನಗರದ ಅಳಪೆ ಪಡೀಲ್ ಜೆ.ಎಂ ರೋಡ್‌ನಲ್ಲಿರುವ ಲಿಂಕ್ ವ್ಯಸನಮುಕ್ತ ಸಮಗ್ರ ಪುನರ್ವಸತಿ ಕೇಂದ್ರಕ್ಕೆ ಅಮಲು ಚಿಕಿತ್ಸೆಗಾಗಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಮುಬಶೀರ್ ಫರಾನ್ (36) ಎಂಬವರು ಜ.5ರಂದು ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದರು. ಜು.23ರಂದು ಅವರು ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿರುವುದಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಪತ್ತೆಯಾದಲ್ಲಿ 0824-2220529,9480805354 ಸಂಪರ್ಕಿಸಿ ಮಾಹಿತಿ ನೀಡುವಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.