ಪೆರ್ನೆ ಮಜೀದಿಯ ಅನುದಾನಿತ ಶಾಲಾಡಳಿತ ಬದ್ರಿಯಾ ಮಸೀದಿಯ ಅಧೀನಕ್ಕೆ ಹಸ್ತಾಂತರ
Update: 2025-07-31 19:41 IST
ಉಪ್ಪಿನಂಗಡಿ, ಜು.31: ಪೆರ್ನೆ ದೊರ್ಮೆಯ ಮಜೀದಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತವನ್ನು ಬದ್ರಿಯಾ ಜುಮಾ ಮಸೀದಿಯ ಅಧೀನಕ್ಕೆ ಹಸ್ತಾಂತರಿಸಲಾಗಿದೆ.
ಒಂದು ಕಾಲದಲ್ಲಿ 300ಕ್ಕೂ ಅಧಿಕ ಮಕ್ಕಳನ್ನು ಹೊಂದಿದ್ದ ಈ ಶಾಲೆಗೆ 80 ವರ್ಷದ ಇತಿಹಾಸವಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೇವಲ 14 ಮಕ್ಕಳನ್ನು ಹೊಂದಿದೆ.
ಹಸ್ತಾಂತರದ ವೇಳೆ ಶಾಲಾ ಸಂಚಾಲಕರಾಗಿದ್ದ ಸುಲೈಮಾನ್ ಪುರಿಯ, ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದ ಮಿತ್ರದಾಸ್ ರೈ, ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಉಮ್ಮರ್ ಫಾರೂಕ್, ಕಾರ್ಯ ದರ್ಶಿ ಮೊಯ್ದಿನ್ ಕುಟ್ಟಿ, ಕೋಶಾಧಿಕಾರಿ ಅಬ್ದುಲ್ ಲತೀಫ್, ಸದಸ್ಯರಾದ ಆದಂ ದೊರ್ಮೆ, ಇಬ್ರಾಹಿಂ ಪಲ್ಲತ್ತಾರು, ಹೈದರ್ ಬಾನೋಟು, ನಿವೃತ್ತ ಶಿಕ್ಷಕ ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.