ಜಮೀಯ್ಯತುಲ್ ಫಲಾಹ್ ಪುತ್ತೂರು ತಾಲೂಕು ಘಟಕ: ಪದಾಧಿಕಾರಿಗಳ ಆಯ್ಕೆ
ಪಿ ಬಿ ಹಸೈನಾರ್ ಹಾಜಿ
ಪುತ್ತೂರು: ಜಮೀಯ್ಯತುಲ್ ಫಲಾಹ್ ಪುತ್ತೂರು ತಾಲೂಕು ಘಟಕದ ಮಹಾಸಭೆಯು ಆ.2ರಂದು ಜಮೀಯ್ಯತುಲ್ ಫಲಾಹ್ ಕಛೇರಿಯ ಮೇಲಿನ ಮಹಡಿಯಲ್ಲಿ ಘಟಕದ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕೇಂದ್ರ ಘಟಕದಿಂದ ವೀಕ್ಷಕರಾಗಿ ನೇಮಿಸಲ್ಪಟ್ಟ ಬಂಟ್ವಾಳ ಘಟಕದ ಅಧ್ಯಕ್ಷ ರಶೀದ್ ವಿಟ್ಲ ಹಾಗೂ ಸುಳ್ಯ ಘಟಕದ ಅಧ್ಯಕ್ಷ ಅಬೂಬಕರ್ ಕೆ.ಎಂ.ಅರಂತೋಡು ಉಪಸ್ಥಿತಿಯಲ್ಲಿ 2025-27 ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಪಿ.ಬಿ. ಹಸೈನಾರ್ ಹಾಜಿ ದರ್ಬೆ, ಕಾರ್ಯದರ್ಶಿಯಾಗಿ ಕೆ. ಇಸುಬು ದರ್ಬೆ, ಕೋಶಾಧಿಕಾರಿ ಯಾಗಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಉಪಾಧ್ಯಕ್ಷರುಗಳಾಗಿ ಅಶ್ರಫ್ ಕೊಟ್ಯಾಡಿ ಮತ್ತು ಅಬೂಬಕರ್ ಮುಲಾರ್, ಜೊತೆ ಕಾರ್ಯದರ್ಶಿಯಾಗಿ ಹುಸೈನ್ ದರ್ಬೆ, ಸಂಘಟನಾ ಕಾರ್ಯದರ್ಶಿ ಯಾಗಿ ಶರೀಫ್ ಮುಕ್ರಂಪಾಡಿ,ಪತ್ರಿಕಾ ಕಾರ್ಯದರ್ಶಿಯಾಗಿ ಡಾ.ಹಾಜಿ.ಯಸ್. ಅಬೂಬಕರ್ ಆರ್ಲ ಪದವು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ,ನ್ಯಾಯವಾದಿ ಕೆ.ಎಂ. ಸಿದ್ದೀಕ್ ಹಾಜಿ, ಉಮ್ಮರ್ ಕರಾವಳಿ,ನೋಟರಿ ನ್ಯಾಯವಾದಿ ಫಝಲುಗ್ರಹೀಂ ಹಾಜಿ ಕೆ. ಅಬ್ದುಲ್ ರಹಿಮಾನ್ ಯೂನಿಕ್, ಅಬ್ದುಲ್ ರಹಿಮಾನ್ ಅಝಾದ್, ಅಬ್ದುಲ್ ಅಝೀಝ್ ದರ್ಬೆ,ಬಿ. ಎ. ಶುಕೂರ್ ಹಾಜಿ ಕಲ್ಲೆಗ,ಅಶ್ರಫ್ ಗೋಳಿಕಟ್ಟೆ,ಎಂ.ಎಂ. ಅಝೀಝ್,ಅಬ್ದುಲ್ ಮಜೀದ್,ಎಂ.ಕೆ. ರಫೀಕ್, ಶೇಖ್ ಝನುದ್ದೀನ್ ಪುತ್ತೂರು ಅವಿರೋಧವಾಗಿ ಆಯ್ಕೆಯಾದರು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್ ಹಾಗೂ ಲೆಕ್ಕಪತ್ರವನ್ನು ಎಡ್ವಕೇಟ್ ಕೆ.ಎಂ. ಸಿದ್ದೀಕ್ ಹಾಜಿ ಮಂಡಿಸಿದರು.ಚುನಾವಣಾ ವೀಕ್ಷಕರಾಗಿ ಪಾಲ್ಗೊಂಡ ರಶೀದ್ ವಿಟ್ಲ ಮಾತನಾಡಿ, ಜಮೀಯ್ಯತುಲ್ ಫಲಾಹ್ ಪುತ್ತೂರು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಒಟ್ಟು 53 ಆಜೀವ ಸದಸ್ಯರಿರುವ ಪುತ್ತೂರು ಘಟಕದಲ್ಲಿ ಮಹಾಸಭೆಗೆ 28 ಸದಸ್ಯರು ಭಾಗವಹಿಸಿದರು. ಅದರಲ್ಲಿ 21 ಸದಸ್ಯರನ್ನು ಮುಂದಿನ ಅವಧಿಗೆ ಅವಿರೋಧವಾಗಿ ಆಯ್ಕೆಮಾಡಲಾಯಿತು. ಅಧ್ಯಕ್ಷತೆ ವಹಿಸಿದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಸ್ವಾಗತಿಸಿ, ನೂತನ ಕಾರ್ಯದರ್ಶಿ ಕೆ ಇಸುಬು ದರ್ಬೆ ವಂದಿಸಿದರು.