ನ.8: ‘ಕಾವ್ಯಾಂ ವ್ಹಾಳೊ’ ಕೊಂಕಣಿ ಕವಿಗೋಷ್ಟಿ
Update: 2025-11-06 14:31 IST
ಮಂಗಳೂರು, ನ.6: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನವೆಂಬರ್ 8ರಂದು ಸಂಜೆ 4 ಗಂಟೆಗೆ ಕಾವ್ಯಾಂ ವ್ಹಾಳೊ-8 ಕವಿಗೋಷ್ಠಿ ಕೊಂಕಣಿ ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿದೆ.
ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಕೊಂಪದವು ಮುಖ್ಯ ಅತಿಥಿಯಾಗಿ ಹಾಗೂ ಕೊಂಕಣಿಯ ಹಿರಿಯ ಸಾಹಿತಿಯಾದ ಜೊಸ್ಸಿ ಪಿಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಖ್ಯಾತ ನಾಟಕಕಾರ ಹಾಗೂ ಚಲನಚಿತ್ರ ನಿರ್ಮಾಪಕ ಹೆನ್ರಿ ಡಿಸಿಲ್ವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ವಹಿಸಿಸಲಿರುವರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಐರಿನ್ ರೆಬೆಲ್ಲೊ ವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.