ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್: ಓರ್ವ ಆರೋಪಿ ಬಂಧನ
Update: 2026-01-15 23:03 IST
ಮಂಗಳೂರು, ಜ.15: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್ ಹಾಕಿ ವೈರಲ್ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಧರ್ಮಪಾಲ್ ಶೆಟ್ಟಿ(70) ಬಂಧಿತ ಆರೋಪಿ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ರಾವ್ ಎಂಡ್ ರಾವ್ ಸರ್ಕಲ್ ಬಳಿ ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿ ಅಕ್ರಮ ವ್ಯವಹಾರವೂ ನಡೆಯುತ್ತಿದೆ. ಈ ಬಗ್ಗೆ ಮಾಹಿತಿಯನ್ನು ಸಂಬಂಧ ಪಟ್ಟವರಿಗೆ ತಲುಪಿಸಬೇಕು ಎಂದು ರವೀಂದ್ರ ಎಂಬ ವ್ಯಕ್ತಿ ವಾಟ್ಸಪ್ ಪೋಸ್ಟ್ ಹಾಕಿದ್ದ. ಇದು ವೈರಲ್ ಆಗಿತ್ತು.