ಅ.14, 15ರಂದು ವಿಧಾನ ಪರಿಷತ್ ಸಭಾಪತಿ ದ.ಕ. ಜಿಲ್ಲಾ ಪ್ರವಾಸ
Update: 2025-10-13 17:56 IST
ಮಂಗಳೂರು : ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅವರು ಅ.14 ಮತ್ತು 15ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅ.14ರಂದು ಬೆಳಗ್ಗೆ 10ಕ್ಕೆ ಕಲ್ಕೂರ ಪ್ರತಿಷ್ಠಾನದ ಕಾರಂತ ಪ್ರಶಸ್ತಿ ಪ್ರಶಸ್ತಿ ಸ್ವೀಕಾರ, ಅ.15ರಂದು ಬೆಳಗ್ಗೆ 10ಕ್ಕೆ ಮಂಜೇಶ್ವರ ಕೇರಳ ತುಳು ಅಕಾಡಮಿ ಸಭಾಂಗಣದಲ್ಲಿ ತುಳುರತ್ನ, ಡಾ.ಪಿ.ವೆಂಕಟರಾಜ ಪುಣಿಂಚಿತ್ತಾಯರ ಪುವೆಂಪು ನೆನಪು -2025 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.