ಮೀಫ್ ವತಿಯಿಂದ ಓರಿಯೇಂಟೇಶನ್ ಕಾರ್ಯಕ್ರಮ
ಮಂಗಳೂರು, ಆ.6: ಮೀಫ್ ಉಚಿತ ಸೀಟು ಯೋಜನೆಯಡಿ ಹಾಲಿ ವರ್ಷದಲ್ಲಿ Para Medical/Nursing ಕೋರ್ಸುಗಳಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮವು ಬುಧವಾರ ಅಡ್ಯಾರ್‌ನ ಬರಕಾ ವಿದ್ಯಾಸಂಸ್ಥೆಯಲ್ಲಿ ಜರಗಿತು.
ಉಚಿತ ಸೀಟು ನೀಡಿದ ಉದ್ದೇಶ, ಅದರ ಪ್ರಾಯೋಜಕತ್ವ ನೀಡಿದ ವಿದ್ಯಾಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿ ಗಳಿಗೆ ಹಾಗೂ ಪೋಷಕರುಗಳಿಗೆ ನೀಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಹಂತ ಹಂತವಾಗಿ ನಡೆಸಲಾಗುವುದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಉಚಿತ ಸೀಟು ಪಡೆದ ದ.ಕ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ 72 ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
ಕಳೆದ ವರ್ಷ ಈ ವಿಭಾಗದಲ್ಲಿ ಉಚಿತ ಸೀಟು ಪಡೆದ 14 ವಿದ್ಯಾರ್ಥಿಗಳನ್ನು ಅವರ ಪೋಷಕರ ಜೊತೆ ಸಮಾ ಲೋಚನೆ ನಡೆಸಲಾಯಿತು. ಅಲ್ಲದೆ ಅವರ ಅಂಕಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ಸಭೆಯಲ್ಲಿ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ, ಸಂಚಾಲಕ ಹೈದರ್ ಮರ್ಧಾಳ, ಬರಕಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಬಿ.ಎಸ್. ಶರಫುದ್ದೀನ್, ಮೀಫ್ ಇಒ ಅಶ್ರಫ್ ಬಾವ, ಮ್ಯಾನೇಜರ್ ಮುಹಮ್ಮದ್ ತೌಸೀಫ್ ಉಪಸ್ಥಿತರಿದ್ದರು.