ಪಿ.ಎ.ಕಾಲೇಜು: ಮಾದಕ ವ್ಯಸನ ಮತ್ತು ರ‍್ಯಾಗಿಂಗ್ ವಿರುದ್ಧ ಜಾಗೃತಿ ಕಾರ್ಯಕ್ರಮ
ಕೊಣಾಜೆ: ಪಿ.ಎ ಪ್ರಥಮ ದರ್ಜೆ ಕಾಲೇಜು ಮತ್ತು ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಸಹಯೋಗದೊಂದಿಗೆ ಮಾದಕ ವ್ಯಸನ ಮತ್ತು ರ‍್ಯಾಗಿಂಗ್ ವಿರುದ್ದ ಜಾಗೃತಿ ಕಾರ್ಯಕ್ರಮವು ಪಿ.ಎ. ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ವಿಭಾಗದ ಡಿಜಿಪಿ ಬಿ.ಪಿ ದಿನೇಶ್ ಕುಮಾರ್ ಮಾತನಾಡಿ, ಮಾದಕ ವ್ಯಸನ ಹಾಗೂ ರ‍್ಯಾಗಿಂಗ್ ಎರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಅವೆರಡೂ ಶಿಕ್ಷಾರ್ಹ ಅಪರಾಧವಾಗಿದ್ದು ಅವುಗಳಿಂದ ದೂರವಿದ್ದಷ್ಟು ನಮಗೂ ನಮ್ಮ ಸಮಾಜಕ್ಕೂ ಒಳಿತೆಂಬ ಸಂದೇಶವನ್ನು ನೀಡಿದರು".
ಮಾದಕ ವ್ಯಸನ ತಡೆ ಕೇಂದ್ರದ ಉಪ ನಿರ್ದೇಶಕರಾದ ಡಾ. ಮಾಜಿ ಜೋಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿ.ಎ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೇಸ್ ಕ್ಯಾಂಪಸ್ ಎಜಿಎಂ ಶರಫುದ್ದೀನ್, ಡೀನ್ ಸ್ಟುಡೆಂಟ್ ಅಫೈರ್ ಪೇಸ್ ಡಾ. ಸಯ್ಯಿದ್ ಅಮೀನ್, ಪರ್ಚೇಸಿಂಗ್ ವ್ಯವಸ್ಥಾಪಕರಾದ ಹಾರಿಸ್ ಟಿ.ಡಿ ಹಾಗೂ ಪಿ.ಎ ಕಾಲೇಜ್ ಆಫ್ ಪಿಸಿಯೋಥೆರಪಿ ಪ್ರಾಂಶುಪಾಲರಾದ ಡಾ ಸಜೀಶ್ ರಘುನಾಥನ್ ಉಪಸ್ಥಿತರಿದ್ದರು.
ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್ ಸ್ವಾಗತಿಸಿ, ಉಪಪ್ರಾಂಶುಪಾಲರಾದ ಡಾ. ಮುಹಮ್ಮದ್ ಮುಬೀನ್ ವಂದಿಸಿದರು. ವಿದ್ಯಾರ್ಥಿ ಶಾಹಿಲ್ ಇಸ್ಮಾಯಿಲ್ ಪ್ರಾರ್ಥಿಸಿದರು. ಅಧ್ಯಾಪಕರಾದ ಲವೀನ ಡಿ.ಸೋಜ ಮತ್ತು ತ್ರಿವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು.