×
Ad

ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್

Update: 2024-12-27 11:15 IST

ಪುತ್ತೂರು: ‘ಪೆನ್ ಪಾಯಿಂಟ್ ಸ್ನೇಹ ವೇದಿಕೆ' ಆಯೋಜಿಸಿದ 4ನೇ ಆವೃತ್ತಿಯ 'ಕ್ರಿಕೆಟ್ ಫೆಸ್ಟ್'ನಲ್ಲಿ ಬ್ಲೂ ಹಂಟರ್ಸ್ ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬುಧವಾರ ಪುತ್ತೂರಿನ ಕೊಂಬೆಟ್ಟು ಕಾಲೇಜು ಮೈದಾನದಲ್ಲಿ ಪಂದ್ಯಾಟ ನಡೆಯಿತು. ಪಂದ್ಯಾವಳಿಯುದ್ದಕ್ಕೂ ಉದ್ಯಮಿ ಇರ್ಫಾನ್ ಕನ್ಯಾರಕೋಡಿ ಮಾಲಕತ್ವದ, ಇಸಾಕ್ ಸಜಿಪ ನಾಯಕತ್ವದ ಬ್ಲೂ ಹಂಟರ್ಸ್ ಪ್ರಾಬಲ್ಯ ಸಾಧಿಸಿತು. ಲೀಗ್ ಹಂತದಲ್ಲಿ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಿದ್ದ ತಂಡ, ಪ್ರಶಸ್ತಿ ಸುತ್ತಿನಲ್ಲಿ ಸಾಬಿತ್ ಕುಂಬ್ರ ನಾಯಕತ್ವದ ವಿಶನ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು.

ಟೂರ್ನಿಯಲ್ಲಿ ಈ ಬಾರಿ ಒಟ್ಟು 5 ತಂಡಗಳು ಪಾಲ್ಗೊಂಡವು. ಬ್ಲೂ ಹಂಟರ್ಸ್, ವಿಶನ್ ಕಿಂಗ್ಸ್ ಜೊತೆ ಸರ್ಫರಾಝ್ ವಳಾಲ್ ಮಾಲಕತ್ವದ ಐ-ಮೇಡ್ ವಾರಿಯರ್ಸ್, ಶಾಕಿರ್ ಹಕ್ ನೆಲ್ಯಾಡ್ ಸಾರಥ್ಯದ ಮಾಜಿ ಚಾಂಪಿಯನ್ ರಾಯಲ್ ಇಂಡಿಯನ್ಸ್, ಅಶ್ರಫ್ ಕಟ್ಟದಪಡ್ಪು ಮಾಲಕತ್ವದ ಚಾಲೆಂಜರ್ಸ್ ತಂಡಗಳ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತು. ಲೀಗ್ ಹಂತದಲ್ಲಿ ಬ್ಲೂ ಹಂಟರ್ಸ್ ಅಗ್ರಸ್ಥಾನಿಯಾದರೆ, ಕೆ.ಎಂ.ಶರೀಫ್ ನಾಯಕತ್ವದ ಐ-ಮೇಡ್ ವಾರಿಯರ್ಸ್ 2ನೇ, ವಿಶನ್ ಕಿಂಗ್ಸ್ 3ನೇ ಸ್ಥಾನ ಪಡೆದವು. ಸೆಮಿಫೈನಲ್ನಲ್ಲಿ ಐ-ಮೇಡ್ ತಂಡವನ್ನು ಸೋಲಿಸಿ ವಿಶನ್ ಕಿಂಗ್ಸ್ ಫೈನಲ್ ಪ್ರವೇಶಿಸಿತು. ರಾಯಲ್ ಇಂಡಿಯನ್ಸ್ ಹಾಗೂ ಚಾಲೆಂಜರ್ಸ್ ತಂಡಗಳು ಗುಂಪು ಹಂತದಲ್ಲೇ ನಿರ್ಗಮಿಸಿದವು.

ಬ್ಲೂ ಹಂಟರ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಜಮಾಲ್ ಕಲ್ಲಡ್ಕ ಸರಣಿಶ್ರೇಷ್ಠ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬ್ಯಾಟಿಂಗ್, ಬೌಲಿಂಗ್ ಜೊತೆ ಫೀಲ್ಡಿಂಗ್ ನಲ್ಲೂ ಮಿಂಚಿದ ಸಾಬಿತ್ ಮೀನಾವು ಶ್ರೇಷ್ಠ ಆಲ್ರೌಂಡರ್ ಪ್ರಶಸ್ತಿಗೆ ಭಾಜನರಾದರು.

ವಿಶನ್ ಕಿಂಗ್ಸ್ ನ ತನ್ಸೀಫ್ ಬಿ.ಎಂ. ಶ್ರೇಷ್ಠ ಬ್ಯಾಟರ್, ಮುಸ್ತಫಾ ದೇರಾಜೆ ಶ್ರೇಷ್ಠ ಬೌಲರ್, ಐ-ಮೇಡ್ ತಂಡದ ಕೆ.ಎಂ.ಶರೀಫ್ ಶ್ರೇಷ್ಠ ಫೀಲ್ಡರ್, ರಾಯಲ್ಸ್ ಇಂಡಿಯನ್ಸ್ನ ಅನ್ಸಾರ್ ಕಾಟಿಪಳ್ಳ ಶ್ರೇಷ್ಠ ವಿಕೆಟ್ ಕೀಪರ್ ಪ್ರಶಸ್ತಿ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News