×
Ad

ಎನ್ ಎಸ್ ಎಸ್ ನಿಂದ ವ್ಯಕ್ತಿತ್ವ ಬದಲಾವಣೆ ಸಾಧ್ಯ : ಪ್ರೊ. ಜೀವನ್ ರಾಜ್

Update: 2025-11-01 12:23 IST

ಮಂಗಳೂರು (ನ. 01): ಎನ್ ಎಸ್ ಎಸ್ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ತಾಳ್ಮೆಯ ಜೊತೆಗೆ ನಾಯಕತ್ವ ಗುಣವನ್ನು ಬೆಳೆಸುತ್ತದೆ, ಈ ನಾಯಕತ್ವ ಗುಣವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಸಮಾಜಕ್ಕೆ ಒಳಿತಾಗುವ ಕಾರ್ಯವನ್ನು ಮಾಡಬೇಕು ಎಂದು ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ ಹೇಳಿದರು.

ಯೇನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ-10 ಇದರ ವತಿಯಿಂದ ನಡೆದ 'ಎಂಪವರಿಂಗ್ ಚೇಂಜ್ ಮೇಕರ್' ಎಂಬ ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು "ಎನ್ ಎಸ್ ಎಸ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಮಾಜಮುಖಿಯಾಗಿರುತ್ತಾರೆ, ವಿದ್ಯಾರ್ಥಿಗಳಿಗೆ ಮತ್ತು ಭವಿಷ್ಯದ ಯುವಕರಿಗೆ ಬೇಕಾದ ಮಾನವೀಯ ಕಾಳಜಿ, ನಾಯಕತ್ವ ಗುಣ, ಮತ್ತು ಪರೋಪಕಾರ ಗುಣ NSS ನೀಡುತ್ತದೆ" ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೀವನ್ ರಾಜ್ ಮಾತನಾಡಿ, "NSS ವೇದಿಕೆ ಆತ್ಮಬಲವನ್ನು ತುಂಬುತ್ತದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಹುತೇಕ ಮಂದಿ ತಮ್ಮ ಕಾಲೇಜು ಜೀವನದಲ್ಲಿ NSS ನ ವಿದ್ಯಾರ್ಥಿಗಳಾಗಿದ್ದರು. ಎನ್ ಎಸ್ ಎಸ್ ನಿಂದ ವ್ಯಕ್ತಿತ್ವ ಉತ್ತಮವಾಗಿ ಬೆಳೆಯಲು ಸಾಧ್ಯ" ಎಂದರು.

ವೇದಿಕೆಯಲ್ಲಿ ಯೇನೆಪೋಯ ಕಾಲೇಜಿನ ಎನ್ ಎಸ್ ಎಸ್ ಘಟಕ-10 ಇದರ ಕಾರ್ಯಕ್ರಮಾಧಿಕಾರಿ ಅಬ್ದುಲ್ ರಶೀದ್ ಕೆ ಎಂ, ವಿದ್ಯಾರ್ಥಿ ಸಂಯೋಜಕರಾದ ಉಬೈಸ್ ಪಿ ಯು, ಫಾತಿಮಾ ಫಿದಾ, ಹಾಗು ವಿದ್ಯಾರ್ಥಿ ನಾಯಕರಾದ ಸಿಲ್ಮಿ ಮೆಹಬೂಬ್, ಮುಹಮ್ಮದ್ ರಿಜಾಝ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಲುಬ್ನಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಬಾತಿಶ್ ಪ್ರಾರ್ಥಿಸಿದರು. ಎನ್ ಎಸ್ ಎಸ್ ಘಟಕ-10 ಇದರ ಕಾರ್ಯಕ್ರಮಾಧಿಕಾರಿ ಅಬ್ದುಲ್ ರಶೀದ್ ಕೆ ಎಂ ಸ್ವಾಗತಿಸಿದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News