×
Ad

ದುಬೈಯಲ್ಲಿ ವಿಶ್ವ ಶಾಲಾ ಶೃಂಗಸಭೆ: ಪ್ರೆಸ್ಟೀಜ್ ಶಾಲೆಗೆ ‌ʼಔಟ್ಸ್ಯಾಂಡಿಂಗ್‌ ಸ್ಕೂಲ್‌ ಆಫ್‌ ದಿ ಇಯರ್ʼ ಪ್ರಶಸ್ತಿ

Update: 2025-11-04 18:42 IST

ದುಬೈ: ದುಬೈನಲ್ಲಿ ನಡೆದ ವಿಶ್ವ ಶಾಲಾ ಶೃಂಗಸಭೆಯಲ್ಲಿ ಮಂಗಳೂರಿನ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆ ಮತ್ತು ಕಾಲೇಜಿಗೆ ವರ್ಷದ ಅತ್ಯುತ್ತಮ ಶಾಲೆ (ಔಟ್ಸ್ಯಾಂಡಿಂಗ್‌ ಸ್ಕೂಲ್‌ ಆಫ್‌ ದಿ ಇಯರ್) ಪ್ರಶಸ್ತಿ ಲಭಿಸಿದೆ.

ಪ್ರೆಸ್ಟೀಜ್ ಶಾಲೆಯ ಅಧ್ಯಕ್ಷ ಹೈದರ್ ಅಲಿ ಅವರು ಖ್ಯಾತ ಲೇಖಕ ಚೇತನ್ ಭಗತ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೈದರ್ ಅಲಿ ಅವರು, "ನಮ್ಮ ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಉತ್ಸಾಹ ಮತ್ತು ಪೋಷಕರ ಬೆಂಬಲದಿಂದ ಈ ಪ್ರಶಸ್ತಿ ಲಭಿಸಿದೆ. ಯುವ ಮನಸ್ಸುಗಳನ್ನು ರೂಪಿಸುವ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಮ್ಮ ಬದ್ಧತೆಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಕ್ಕೆ ನಮಗೆ ಹೆಮ್ಮೆಯಿದೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News