×
Ad

ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ: 17 ಮಂದಿ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲು

Update: 2023-12-31 16:41 IST

ಉಳ್ಳಾಲ: ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸುವಂತೆ ಒತ್ತಾಯಿಸಿ ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ ನಡೆಸಿದ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

ಡಿವೈಎಫ್ಐ ಮುಖಂಡರು ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಠಾಣೆಗೆ ಮನವಿ ಮಾಡಿದ್ದರು. ಉಳ್ಳಾಲ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶ ಗೊಂಡ ಡಿವೈಎಫ್ಐ ಮುಖಂಡರು ಶುಕ್ರವಾರ ತೊಕ್ಕೊಟ್ಟು ಬಸ್ ನಿಲ್ದಾಣ ದಲ್ಲಿ ಪ್ರತಿಭಟನೆ ನಡೆಸಿ ಪ್ರಭಾಕರ ಭಟ್ ನ್ನು ಕೂಡಲೇ ‌ಬಂಧಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದ್ದರು.

ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಇಮ್ತಿಯಾಝ್, ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು ಮುಖಂಡರಾದ ಸಂತೊಷ್ ಕುಮಾರ್ ಬಜಾಲ್, ರಿ‌ಝ್ವಾನ್ ಹರೇಕಳ, ಇಬ್ರಾಹಿಂ ಮದಕ, ಕೃಷ್ಣಪ್ಪ ಸಾಲ್ಯಾನ್, ಜಯಂತ್ ನಾಯ್ಕ್, ಅಶ್ರಫ್ ಹರೇಕಳ, ನೌಫಲ್ ಕೋಟೆಪುರ, ಸಮೀರ್, ವಾಕರ್ ಕೋಟಿಪುರ, ಅಶ್ಫಾಕ್ ಅಲೇಕಳ, ಅಶುಂತ್ ಡಿಸೋಜ, ಸಿಯಾನ್ ಬಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News