×
Ad

ಜ. 24ರಿಂದ ಸಮಸ್ತ ಪಬ್ಲಿಕ್ ಪರೀಕ್ಷೆ: ದ.ಕ ಜಿಲ್ಲೆಯಲ್ಲಿ 10,586 ಪರೀಕ್ಷಾರ್ಥಿಗಳು

ಜ. 23ರಂದು ಮಾಹಿತಿ ಶಿಬಿರ

Update: 2026-01-22 20:10 IST

ಮಂಗಳೂರು, ಜ.22: ಪ್ರಸಕ್ತ (2025-26ನೇ) ಸಾಲಿನ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದ ಜನರಲ್ ವಿಭಾಗ ಮದ್ರಸದ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷೆಗಳು ಮೂರು ಹಂತಗಳಲ್ಲಿ ನಡೆಯಲಿದೆ. ಭಾರತದಲ್ಲಿ ಜ.24ರಿಂದ ಪ್ರಾರಂಭವಾಗಲಿದೆ. ವಿದೇಶ ರಾಷ್ಟ್ರಗಳಲ್ಲಿ ಜ.23 ಮತ್ತು 24ರಂದು ಹಾಗೂ ಸ್ಕೂಲ್ ಸಿಲೆಬಸ್ ಪ್ರಕಾರದ ಮದ್ರಸಗಳಲ್ಲಿ ಎಪ್ರಿಲ್ 4,5ರಂದು ನಡೆಯಲಿದೆ.

ಅರಬಿಕ್ ಕ್ಯಾಲೆಂಡರ್ ಪ್ರಕಾರ ಶವ್ವಾಲ್‌ನಲ್ಲಿ ಪ್ರಾರಂಭಗೊಂಡು ಶಅಬಾನ್‌ನಲ್ಲಿ ಕೊನೆಗೊಳ್ಳುವ ಮದ್ರಸಗಳು ಜನರಲ್ ವಿಭಾಗವಾಗಿದ್ದು, ಶಾಲಾ ಕ್ರಮದಂತೆ ಜೂನ್‌ನಲ್ಲಿ ಆರಂಭಗೊಂಡು ಮಾರ್ಚ್‌ಗೆ ಕೊನೆಗೊಳ್ಳುವ ಮದ್ರಸಗಳು ಸ್ಕೂಲ್ ಸಿಲಬಸ್ ಮದ್ರಸಗಳಾಗಿರುತ್ತದೆ.

*ದ.ಕ. ಜಿಲ್ಲೆಯಲ್ಲಿ 10,586 ಪರೀಕ್ಷಾರ್ಥಿಗಳು: ಜಿಲ್ಲೆಯಲ್ಲಿ ಪರೀಕ್ಷೆಗಾಗಿ 469 ಸೆಂಟರ್‌ಗಳನ್ನು ನಿಗದಿಪಡಿ ಸಲಾಗಿದ್ದು ಐದನೇ ತರಗತಿಯಲ್ಲಿ 5,486 ವಿದ್ಯಾರ್ಥಿಗಳು, ಏಳನೇ ತರಗತಿಯಲ್ಲಿ 3,660 ವಿದ್ಯಾರ್ಥಿಗಳು, ಹತ್ತನೇ ತರಗತಿಯಲ್ಲಿ 1,320 ವಿದ್ಯಾರ್ಥಿಗಳು, ಪ್ಲಸ್‌ಟು ತರಗತಿಯಲ್ಲಿ 120 ವಿದ್ಯಾರ್ಥಿಗಳ ಸಹಿತ ಒಟ್ಟು 10,586 ಪರೀಕ್ಷಾರ್ಥಿಗಳಿದ್ದಾರೆ.

*ಶುಕ್ರವಾರ ಮೂರು ಗಂಟೆಗೆ ಮಾಹಿತಿ ಶಿಬಿರ: ಜಿಲ್ಲೆಯಲ್ಲಿ ಮಂಗಳೂರು, ಮೂಡುಬಿದಿರೆ, ಮಿತ್ತಬೈಲು, ದೇರಳಕಟ್ಟೆ, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ, ಸುಳ್ಯ ಸಹಿತ ಎಂಟು ಡಿವಿಷನ್ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಈ ವಿಭಾಗಗಳಲ್ಲಿ ಯಥಾಕ್ರಮವಾಗಿ ಹನೀಫ್ ಮುಸ್ಲಿಯಾರ್ ಬೋಳಂತೂರು, ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ, ಮುಸ್ತಫಾ ಫೈಝಿ ಮಲಪ್ಪುರಂ, ಮುಹಮ್ಮದ್ ದಾರಿಮಿ ಕಾಸರಗೋಡು, ಕಾಸಿಂ ಮುಸ್ಲಿಯಾರ್ ಮಠ, ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ, ಹಂಝ ಫೈಝಿ ಕಣ್ಣೂರು, ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು ಪರೀಕ್ಷಾ ಅಧೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪಬ್ಲಿಕ್ ಪರೀಕ್ಷೆಗೆ ಮೇಲ್ವಿಚಾರಕರಾಗಿ ತೆರಳಬೇಕಾದವರಿಗೆ ಪರೀಕ್ಷೆ ಪೂರ್ವವಾಗಿ ಮಾಹಿತಿ ಶಿಬಿರವು ಆಯಾ ವಿಭಾಗೀಯ ಕೇಂದ್ರಗಳಲ್ಲಿ ಜ.23ರ ಅಪರಾಹ್ನ 3ಕ್ಕೆ ನಡೆಯಲಿದೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News