×
Ad

ಜ.24: ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ

Update: 2026-01-22 22:08 IST

ಉಡುಪಿ : ಜಿಲ್ಲೆಯ ಮಣಿಪುರ-ಕಟಪಾಡಿಯ ರಹ್ಮಾನಿಯಾ ಜುಮಾ ಮಸೀದಿ ಅಧೀನದ ಖಲಂದರ್ ಷಾ ದಫ್ ಸಮಿತಿಯ ಆಶ್ರಯದಲ್ಲಿ ಜ. 24 ರಂದು ಇಲ್ಲಿನ ಮಸೀದಿ ವಠಾರದಲ್ಲಿ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ.

ಮಣಿಪುರ ಮಸೀದಿ ಅಧ್ಯಕ್ಷ ರಫೀಕ್ ಕೆ ಶಾಬಾನ್, ಖತೀಬ್ ಹಾಜಿ ಉಮರ್ ಕುಂಞ ಬದವಿ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಉಡುಪಿ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸುವರು.

ದಫ್ ಸ್ಪರ್ಧಾ ವಿಜೇತ ತಂಡಗಳಿಗೆ ಎ ಗ್ರೂಪ್ ವಿಭಾಗದಲ್ಲಿ ಪ್ರಥಮ 10,010/- ರೂಪಾಯಿ, ದ್ವಿತೀಯ 7,010/- ರೂಪಾಯಿ, ತೃತೀಯ 4,010/- ರೂಪಾಯಿ ನಗದು ಹಾಗೂ ಸ್ಮರಣಿಕೆ ಮತ್ತು ಬಿ ಗ್ರೂಪ್ ವಿಭಾಗದಲ್ಲಿ ಪ್ರಥಮ 7,010/- ರೂಪಾಯಿ, ದ್ವಿತೀಯ 5,010/- ರೂಪಾಯಿ, ತೃತೀಯ 3,010/- ರೂಪಾಯಿ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು

ಕಾರ್ಯಕ್ರಮದ ಅಂಗವಾಗಿ ಜನವರಿ 22 ರಂದು ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಬೃಹತ್ ಜಲಾಲಿಯಾ ದ್ಸಿಕ್ರ್ ಮಜ್ಲಿಸ್ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ, ಕೂರತ್ ತಂಙಳ್, ಪೋಸೋಟು ತಂಙಳ್, ಬೇಕಲ್ ಉಸ್ತಾದ್, ಹಾಗೂ ಅಗಲಿದ ಇನ್ನಿತರ ಉಲಮಾ-ಉಮರಾಗಳ ಅನುಸ್ಮರಣಾ ಮಜ್ಲಿಸ್ ನಡೆದಿದ್ದು, ಜನವರಿ 23 ರಂದು ಶುಕ್ರವಾರ ಮಗ್ರಿಬ್ ಬಳಿಕ ವಾರ್ಷಿಕ ದ್ಸಿಕ್ರ್ ಮಜ್ಲಿಸ್ ಹಾಗೂ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ, ಮಣಿಪುರ ಮಸೀದಿ ಖತೀಬ್ ಹಾಜಿ ಉಮರ್ ಕುಂಞ ಬದವಿ ಝಿಕ್ರ್ ಮಜ್ಲಿಸ್ ನೇತೃತ್ವ ವಹಿಸುವರು. ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಅಲ್-ಕಾಮಿಲ್ ಕಿಲ್ಲೂರು ಮುಖ್ಯ ಭಾಷಣಗೈಯುವರು ಎಂದು ರಹ್ಮಾನಿಯಾ ಜುಮಾ ಮಸೀದಿ ಹಾಗೂ ಖಲಂದರ್ ಷಾ ದಫ್ ಸಮಿತಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News