×
Ad

ಪೂಂಜಾಲಕಟ್ಟೆ: ರೌಳತುಲ್ ಉಲೂಮ್ ಮಸೀದಿ, ಮದ್ರಸದಲ್ಲಿ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ

Update: 2025-06-26 14:24 IST

ಬೆಳ್ತಂಗಡಿ,ಜೂ.26 : ಸಮಸ್ತ ನೂರನೇ ಸ್ಥಾಪಕ ದಿನವನ್ನು ಪೂಂಜಾಲಕಟ್ಟೆ ರೌಳತುಲ್ ಉಲೂಮ್ ಮದ್ರಸ ಹಾಗೂ ಮಸೀದಿ ವಠಾರದಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಜಮಾಅತಿನ ಅಧ್ಯಕ್ಷರಾದ ಯೂಸುಫ್ ಹಾಜಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಸದರ್ ಮುಅಲ್ಲಿಂ ಅಬೂಬಕ್ಕರ್ ಫೈಝಿ, ಈ ಬಾರಿಯ ಸಮಸ್ತದ ನೂರನೇ ಶತಮಾನೋತ್ಸವ ಕಾಸರಗೋಡಿನ ಕುಣಿಯ ವಿಶಾಲವಾದ ಮೈದಾನದಲ್ಲಿ ನಡೆಯಲಿದೆ ಎಂದರು.  ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಅಹ್ವಾನ ನೀಡಿದರು.

ಖತೀಬರಾದ ಇಸ್ಮಾಯಿಲ್ ಫೈಝಿ ಸಭೆಯನ್ನು ಉದ್ಘಾಟಿಸಿ ದುಆ ನೆರವೇರಿಸುವ ಮೂಲಕ ಸಮಸ್ತ ನಡೆದು ಬಂದ ದಾರಿಯನ್ನು ವಿವರಿಸಿದರು. ಜಮಾಅತಿನ ಜೊತೆ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಭೆಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಅಲ್ಲಿಮರಾದ ಅಬ್ದುರ್ರಹ್ಮಾನ್ ಫೈಝಿ, ಅಬ್ದುಲ್ ಸಮದ್ ಇಮ್ದಾದಿ, ಮಸೀದಿ ಕಮಿಟಿ ಪಧಾದಿಕಾರಿಗಳು, ಯಂಗ್ ಮೆನ್ಸ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಪುಂಜಾಲಕಟ್ಟೆ, ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದರು.

ಕೊನೆಯದಾಗಿ ಸಿಹಿ ತಿಂಡಿ ವಿತರಿಸಿ ಸ್ವಲಾತಿನೊಂದಿಗೆ ಮುಕ್ತಾಯಗೊಳಿಸಲಾಯಿತು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News