×
Ad

ಪುತ್ತೂರು| ಯುವತಿಗೆ ವಂಚನೆ ಪ್ರಕರಣ: ಸಂತ್ರಸ್ತೆಗೆ ಬೆಂಬಲವಾಗಿದ್ದ ಪ್ರತಿಭಾ ಕುಳಾಯಿಗೆ ಪೊಲೀಸ್ ನೋಟಿಸ್

Update: 2026-02-03 23:42 IST

ಪ್ರತಿಭಾ ಕುಳಾಯಿ

ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ ರಾವ್‌ರ ಪುತ್ರ ಶ್ರೀಕೃಷ್ಣ ರಾವ್ ಎಂಬಾತ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಮಗು ಮಾಡಿದ ಪ್ರಕರಣದಲ್ಲಿ ಸಂತ್ರಸ್ತೆಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಗೆ ಪುತ್ತೂರು ನಗರ ಠಾಣೆಯ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಈ ಸಂಬಂಧ ʼವಾರ್ತಾಭಾರತಿʼ ಪ್ರತಿಭಾ ಕುಳಾಯಿಯವರನ್ನು ಸಂಪರ್ಕಿಸಿ ಮಾತನಾಡಿದ್ದು, ‘‘ನನ್ನ ವಿರುದ್ಧ ಪಿ.ಜಿ.ಜಗನ್ನಿವಾಸ ರಾವ್ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿರುತ್ತಾರೆ. ಈ ದೂರು ಅರ್ಜಿಯನ್ನು ಅಧೀಕ್ಷರು ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನೊಟಿಸ್ ನಲ್ಲಿ ತಿಳಿಸಲಾಗಿದೆ’’ ಎಂದು ತಿಳಿಸಿದ್ದಾರೆ.

‘‘ಪಿ.ಜಿ. ಜಗನ್ನಿವಾಸ ರಾವ್ ಎಂಬಾತ ಈ ಮೊದಲೂ ನನ್ನ ಮೇಲೆ ವಿನಾಕಾರಣ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾನೆ. ಆತನ ಕೇಸುಗಳಿಗೆ ಹೆದರುವುದಿಲ್ಲ. ಸಂತ್ರಸ್ತ ವಿದ್ಯಾರ್ಥಿನಿಯ ಮಗುವಿಗೆ ಫೆ.15 ಅಥವಾ 16ರಂದು ಕಲ್ಲಡ್ಕದಲ್ಲಿ ನಾಮಕರಣ ಸಮಾರಂಭ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’’ ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News