×
Ad

ಖತರ್ ಕಕ್ಕಿಂಜೆ ಶರೀಅತ್ ಕಾಲೇಜು ನೂತನ ಸಮಿತಿಗೆ ಆಯ್ಕೆ

Update: 2026-01-17 19:21 IST

ರಫೀಕ್ ಯು.ಪಿ.

ದೋಹ, ಜ.17: ಖತರ್ ಕಕ್ಕಿಂಜೆ ಶರೀಅತ್ ಕಾಲೇಜಿನ ನೂತನ ಸಮಿತಿಯ ರಚನಾ ಸಭೆಯು ದೋಹಾದ ಐನ್ ಖಾಲಿದ್‌ನ ಗ್ರೀನ್ಸ್ ರೆಸ್ಟೋರೆಂಟ್ ಹಾಲ್‌ನಲ್ಲಿ ನಡೆಯಿತು.

ಹಂಝ ಎ.ಕೆ. ಕಿರಾಅತ್ ಪಠಿಸಿದರು. ಝೈನುದ್ದೀನ್ ಹಾಶಿಮಿ ಉಪನ್ಯಾಸ ನೀಡಿದರು. ಶರಿಅತ್ ಕಾಲೇಜಿನ ಸಾಧನೆ ಹಾಗೂ ಸಮಿತಿಯ ಬಗ್ಗೆ ರಶೀದ್ ಅಬ್ದುಲ್ ಹಮೀದ್ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಮೀದ್ ಫೈಝಿ ಉಸ್ತಾದ್‌ರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಿತಿಯ ಕಾರ್ಯದರ್ಶಿ ಉನೈಜ್ ಬಿ.ಎಲ್. ವಾರ್ಷಿಕ ವರದಿ ವಾಚಿಸಿದರು. ರಶೀದ್ ಅಬ್ದುಲ್ ಹಮೀದ್ ನೂತನ ಸಮಿತಿಗೆ ಅಧಿಕೃತ ಚಾಲನೆ ನೀಡಿದರು.

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಆದಮ್ ಹೈದ್ರೋಸ್ ಚಾರ್ಮಾಡಿ, ಅಧ್ಯಕ್ಷರಾಗಿ ರಫೀಕ್ ಯು.ಪಿ., ಉಪಾಧ್ಯಕ್ಷರಾಗಿ ಉನೈಜ್ ಬಿ.ಎಲ್., ಹಮೀದ್ ಸೊರಂಗ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಎ.ಕೆ., ಕಾರ್ಯದರ್ಶಿಯಾಗಿ ಸಲೀಂ ಯು.ಕೆ, ಇಲ್ಯಾಸ್ ಪಿ.ಕೆ., ಕೋಶಾಧಿಕಾರಿಯಾಗಿ ಉಸ್ಮಾನ್ ಪಿ.ಕೆ., ಸಂಚಾಲಕರಾಗಿ ಝೈನುದ್ದೀನ್ ಹಾಶಿಮಿ ಉಸ್ತಾದ್, ಮಾಧ್ಯಮ ಪ್ರತಿನಿಧಿಯಾಗಿ ಅಜ್ಮಲ್ ರಹ್ಮಾನ್ ಹಾಗು ಅಂಶಾದ್ ಚಾರ್ಮಾಡಿ, ಸಲಹಾ ಸಮಿತಿಯಾಗಿ ರಶೀದ್ ಅಬ್ದುಲ್ ಹಮೀದ್, ಅಕ್ಬರ್ ಎ.ಕೆ., ಆಸೀಫ್ ಎಂ.ಎ. ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News