ಸಂಪೂರ್ಣ ಡಿಜಿಟಲೀಕರಣದೊಂದಿಗೆ ಗ್ರಾಹಕರ ಮನೆಬಾಗಿಲಿಗೆ ಗುಣಮಟ್ಟದ ಸೇವೆ: ಅನಿಲ್ ಲೋಬೊ
ಮಂಗಳೂರು: ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಮನೆಬಾಗಿಲಿಗೆ ಬ್ಯಾಂಕಿಂಗ್ ನಂತಹ ಸೇವೆಯನ್ನು ನೀಡುವ ಉದ್ದೇಶವಿದೆ ಎಂದು ಎಂಸಿಸಿ ಬ್ಯಾಂಕ್ ನ ಅಧ್ಯಕ್ಷ ರಾಗಿ ಪುನರಾಯ್ಕೆಗೊಂಡ ಅನಿಲ್ ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬ್ಯಾಂಕ್ ಸಂಪೂರ್ಣ ಆಧುನೀಕೃತ 16 ಶಾಖೆಗಳನ್ನು ಹೊಂದಿದ್ದು, ಹಿಂದಿನ ವಿತ್ತೀಯ ವರ್ಷದಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ - ಹೀಗೆ ಐದು ಜಿಲ್ಲೆಗಳಿಗೆ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವ ಅನುಮತಿ ಈಗಾಗಲೇ ದೊರಕಿದ್ದು, ಶಾಖೆಗಳನ್ನು ತೆರೆಯುವ ಕೆಲಸ ಪ್ರಗತಿಯಲ್ಲಿದೆ. ಸಾಧ್ಯವಾದರೆ ಜಿಲ್ಲಾವಾರು ಪ್ರಾದೇಶಿಕ ಕಛೇರಿಗಳನ್ನು ತೆರೆದು ವಿಸ್ತರಣೆಯ ಕೆಲಸಕ್ಕೆ ಚುರುಕು ನೀಡಲಾಗುವುದು.
ಮುಂದಿನ ವರ್ಷಗಳಲ್ಲಿ ಬ್ಯಾಂಕಿನ ಕಾರ್ಯ ವ್ಯಾಪ್ತಿಯನ್ನು ಸಮಸ್ತ ಕರ್ನಾಟಕಕ್ಕೆ ತಲುಪಿಸುವ ಕನಸೂ ಇದೆ ಎಂದು ಅನಿಲ್ ಲೋಬೊ ತಿಳಿಸಿದ್ದಾರೆ.
ಸ್ಪರ್ಧಾತ್ಮಕ ದರದಲ್ಲಿ ಸಾಲ :- ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಎಂ.ಸಿ.ಸಿ. ಬ್ಯಾಂಕಿನಲ್ಲಿ ಶಿಕ್ಷಣ, ವಾಹನ, ಎಂ.ಎಸ್. ಎಂ.ಇ ಉದ್ಯಮ ಸಾಲಗಳು ಕಡಿಮೆ ಮತ್ತು ಸ್ಪರ್ಧಾರ್ತ್ಮಕ ಬಡ್ಡಿದರದಲ್ಲಿ ಲಭ್ಯವಿರುವುದು ಶಿಕ್ಷಣ ಸಾಲಕ್ಕೆ ನಮ್ಮಬ್ಯಾಂಕ್ ವಿಶೇಷ ಒತ್ತು ನೀಡುತ್ತಿರುವು ದರಿಂದ, ಸೀಮಿತ ಅವಧಿಗೆ ರೂಪಾಯಿ ಹತ್ತು ಲಕ್ಷದವರೆಗಿನ ಶಿಕ್ಷಣ ಸಾಲವನ್ನು ಶೂನ್ಯ ಪ್ರೊಸೆಸಿಂಗ್ ಫೀಸ್‌ನಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅನಿಲ್ ಲೋಬೊ ತಿಳಿಸಿದ್ದಾರೆ.
*ಗ್ರಾಹಕ ಸೇವೆಯಲ್ಲಿ ಸುಧಾರಣೆ :- ಈಗಾಗಲೇ ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ಸರ್ವ ಸುಸಜ್ಜಿತ ಸಿಬ್ಬಂದಿ ಕೌಶಲ್ಯ ತರಬೇತಿ ಕೇಂದ್ರ ಕಾರ್ಯಾಚರಿಸುತ್ತಿದ್ದು, ಈಗಾಗಲೇ ನೂತನ ಸಿಬ್ಬಂದಿ ಆಯ್ಕೆ ನಡೆದಿರುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಕೌಶಲ್ಯಗಳಲ್ಲಿ ನಮ್ಮ ಸಿಬ್ಬಂದಿವರ್ಗ ತರಬೇತಾಗಿದ್ದು, ತ್ವರಿತ ಸೇವೆ ಲಭ್ಯವಿರುತ್ತದೆ. ಹಿರಿಯ ನಾಗರಿಕರಿಗಾಗಿ ಪ್ರತೀ ಶಾಖೆಯಲ್ಲಿ ಉಸ್ತುವಾರಿ ಸಿಬ್ಬಂದಿ ಲಭ್ಯವಿದ್ದು, ಎಲ್ಲಾ ಶಾಖೆಗಳಲ್ಲಿ ಸೂಕ್ತ ವಾಹನನಿಲುಗಡೆ ವ್ಯವಸ್ಥೆಯಿದೆ. ಗ್ರಾಹಕರಿಗೆ ಯಾವುದೇ ಶಾಖೆಯ ಗ್ರಾಹಕ ಸೇವೆಯ ಬಗ್ಗೆ ಅಹವಾಲುಗಳಿದ್ದರೆ ಕುಂದು ಕೊರತೆ ನಿವಾರಣೆಗಾಗಿ ಸ್ಥಾಪಿಸಲಾಗುವ ವಿಶೇಷ ಘಟಕವನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ.
*ಸಂಪೂರ್ಣ ಡಿಜಿಟಲೀಕರಣ :- ಮೊಬಾಯಿಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಸಾಕಷ್ಟು ಗ್ರಾಹಕರು ಆಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳುತ್ತಿದ್ದರೂ, ಸದರಿ ವಿತ್ತೀಯ ವರ್ಷದಲ್ಲಿ ಬ್ಯಾಂಕಿನ ಎಲ್ಲಾ ವಿತ್ತೀಯ ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ.
*ಸಮಾಜಿಕ ಸಹಾಯಹಸ್ತ : -ಕಳೆದ ವರ್ಷ ನಮ್ಮ ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವ ಸಂದರ್ಭದಲ್ಲಿ ಸಮಾಜದ ಅಶಕ್ತ ವರ್ಗದವರಿಗೆ ವೈದ್ಯಕೀಯ, ಶಿಕ್ಷಣ, ಗೃಹ ನಿರ್ಮಾಣ ಮತ್ತು ದುರಸ್ತಿ ಮತ್ತು ಹೆಣ್ಣುಮಕ್ಕಳ ವಿವಾಹದ ವೆಚ್ಚಕ್ಕೆ ನೆರವು ನೀಡಿ,ಬ್ಯಾಂಕಿನಿಂದ ಸಮಾಜಕ್ಕೆ ಸಹಾಯಹಸ್ತ ಚಾಚಿದ್ದೇವೆ. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಘ – ಸಂಸ್ಥೆಗಳಿಗೆ ಬ್ಯಾಂಕಿನ ಸಭಾಂಗಣವನ್ನು ಉಚಿತವಾಗಿ ನೀಡುತ್ತಿದ್ದೇವೆ. ಈ ಸೇವೆ ಮುಂದುವರೆಯಲಿದೆ ಎಂದು ಅನಿಲ್ ಲೋಬೊ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ನೂತನ ಆಡಳಿತ ಮಂಡಳಿಯಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ'ಸಿಲ್ವ ಇವರ ಜೊತೆಗೆ ನಿರ್ದೆಶಕರಾದ ಡಾ| ಜೆರಾಲ್ಡ್ ಪಿಂಟೋ ಕಲ್ಯಾಣ್‌ಪುರ, ಅಂಡ್ರೊಡಿ'ಸೋಜ ಪಾಲಡ್ಕ, ಜೋಸೆಫ್ ಎಂ.ಅನಿಲ್ ಪತ್ರಾವೊ ದೆರೆಬೈಲ್, ಡೇವಿಡ್ ಡಿ'ಸೋಜ ಬಜಪೆ, ಎಲ್ ಕಿರಣ್ ಕ್ರಾಸ್ಟೋ ಗಂಗೊಳ್ಳಿ, ಜೆ.ಪಿ.ರೋಡ್ರಿಗಸ್ ಪುತ್ತೂರು, ರೋಶನ್ ಡಿ'ಸೋಜ ಮುಡಿಪು, ಹೆರಾಲ್ಡ್ ಜೋನ್ ಮೊಂತೆರೊ ಕೆಲರಾಯ್, ಐರಿನ್ ರೆಬೆಲ್ಲೊ ಕುಲಶೇಖರ, ಡಾ| ಫ್ರೀಡಾ ಫ್ಲಾವಿಯಾ ಡಿ'ಸೋಜ ಬಳ್ಳುಂಜೆ, ಮೆಲ್ವಿನ್ ಅಶ್ವಿನಸ್ ವಾಸ್ ಮಿಲಾಗ್ರಿಸ್, ವಿನ್ಸೆಂಟ್ ಅನಿಲ್ ಲಸ್ರಾದೊ, ಬಂಟ್ವಾಳ ಉಪಸ್ಥಿತರಿದ್ದರು.
ಇತ್ತೀಚೆಗೆ ನಡೆದ ಮಂಗಳೂರು ಕಥೋಲಿಕ್ ಕೋ-ಆಪರೇಟಿ ವ್ ಬ್ಯಾಂಕ್ ನಿ. ಇದರ ನಿರ್ದೇಶಕ ಮಂಡಳಿಯ 2023 -2028ರ ಅವಧಿಯ ಚುನಾವಣೆಯಲ್ಲಿ ಅನಿಲ್ ಲೋಬೊ ನೇತೃತ್ವದ 14 ಅಭ್ಯರ್ಥಿ ಗಳು ಅವಿರೋಧವಾಗಿ ಆಯ್ಕೆಯಾಗಿ ರುತ್ತಾರೆ. ಅನಿಲ್ ಲೋಬೊ, ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧ ವಾಗಿ ಪುನರಾಯ್ಕೆಯಾಗಿರು ತ್ತಾರೆ. ಉಪಾಧ್ಯಕ್ಷರಾಗಿ ಜೆರಾಲ್ಡ್ ಜೂಡ್ ಡಿ'ಸಿಲ್ವ ಆಯ್ಕೆಯಾಗಿರುತ್ತಾರೆ.
ಸೋಮವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಯಲ್ಲಿ ದ.ಕ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾದ ಸುಧೀರ್ ಕುಮಾರ್ ಚುನಾವಣಾಧಿ ಕಾರಿಯಾಗಿದ್ದರು. ಎನ್ ಜೆ. ಗೋಪಾಲ್, ಸುಪರಿಟೆಂಡೆಂಟ್ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು. ಬ್ಯಾಂಕಿನಮಹಾಪ್ರಬಂಧಕ ಸುನಿಲ್ ಮಿನೇಜಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.