×
Ad

ನ.28 ರಂದು ಎನ್‌ಆರ್‌ಐ ಫೋರಂ ಕರ್ನಾಟಕ ಬಹರೈನ್ ವತಿಯಿಂದ ರಾಜ್ಯೋತ್ಸವ ಸಂಭ್ರಮ

Update: 2025-11-05 18:25 IST

ಮಂಗಳೂರು: ಎನ್‌ಆರ್‌ಐ ಫೋರಂ ಕರ್ನಾಟಕ ಬಹರೈನ್ ವತಿಯಿಂದ ಬಹರೈನ್‌ನ ಇಂಡಿಯನ್ ಕ್ಲಬ್ ಓಪನ್ ಗ್ರೌಂಡ್‌ನಲ್ಲಿ ನ.28ರಂದು ಸಂಜೆ 5ಕ್ಕೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮ 2025 ನಡೆಯಲಿದೆ ಎಂದು ಎನ್‌ಆರ್‌ಐ ಫೋರಂ ಕರ್ನಾಟಕ ಬಹರೈನ್ ಅಧ್ಯಕ್ಷ ರಾಜ್‌ಕುಮಾರ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಹರೈನ್ ಕನ್ನಡ ರಾಜ್ಯೋತ್ಸವ 2025ನೆ ಸಾಲಿನ ಪ್ರಶಸ್ತಿಯನ್ನು ಈ ಬಾರಿ ಐವರು ಸಾಧಕರು ಮತ್ತು ಒಂದು ಸಂಸ್ಥೆಗೆ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರಾಯಭಾರಿ ಎಚ್.ಇ. ವಿನೋದ್ ಕೆ. ಜೇಕಬ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ಶಾಸಕ ಅಶೋಕ್ ಕುಮಾರ್ ರೈ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.

ಅಲ್ಲದೆ ಬಹರೈನ್‌ನ ಎಲ್ಲಾ ಸಂಘದ ಅಧ್ಯಕ್ಷರ ಸಹಿತ ಗಲ್ಫ್ ದೇಶಗಳ ಹಲವಾರು ಅತಿಥಿಗಳು ಭಾಗವಹಿಸಲಿದ್ದಾರೆ. ಪುಷ್ಕರಾ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ, ಹಾಸ್ಯ ಕಲಾವಿದರಾದ ರಾಘವೇಂದ್ರ, ಹುಲಿ ಕಾರ್ತಿಕ್ ಮತ್ತು ಚಿಲ್ಲರ್ ಮಂಜು ಅವರಿಂದ ಹಾಸ್ಯ ಪ್ರದರ್ಶನ, ಮ್ಯಾಜಿಷಿಯನ್ ಮುರಳೀಧರ ಕೌಶಿಕ್ ಜಾದೂ ಪ್ರದರ್ಶನ ನೀಡಲಿದ್ದಾರೆ. ಜನಪದ ಗೀತೆಗಳನ್ನು ಗೋನ ಸ್ವಾಮಿ ಮತ್ತು ಶೈಲಜಾ ಶ್ರೀನಿವಾಸ್ ಪ್ರಸ್ತುತಪಡಿಸಲಿದ್ದಾರೆ. ಸ್ಥಳೀಯ ನೃತ್ಯ ಕಲಾವಿದರು ನೃತ್ಯ ಪ್ರದರ್ಶನ ನಡೆಯಲಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಫೋರಂನ ಸೀನಿಯರ್ ಸಲಹೆಗಾರ ಅಸ್ಟೀನ್ ಸಂತೋಷ್ ಹಾಗೂ ಸಮಿತಿ ಸದಸ್ಯ ಸಂಜೀವ್ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News