×
Ad

ಎಚ್‌ಐವಿ-ಏಡ್ಸ್ ಜಾಗೃತಿಗೆ ರೆಡ್ ರಿಬ್ಬನ್ ರನ್-ಯೂತ್ ಫಾರ್ ಮ್ಯಾರಥಾನ್ ಸ್ಪರ್ಧೆ

Update: 2024-09-08 18:48 IST

ಮಂಗಳೂರು: ದ.ಕ.ಜಿಲ್ಲಾಡಳಿತ, ದ.ಕ. ಜಿಪಂ, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ರಾಷ್ಟ್ರೀಯ ಸೇವಾಯೋಜನೆ ಘಟಕ, ರೆಡ್ ರಿಬ್ಬನ್ ಕ್ಲಬ್‌ಗಳು, ಡೆಕಥ್ಲಾನ್, ಭಾರತ್ ಮಾಲ್, ಸ್ಕೂಲ್ ಬುಕ್ ಕಂಪನಿ, ಲಯನ್ಸ್ ಕ್ಲಬ್, ಯಂಗ್ ಇಂಡಿಯಾ ಮಂಗಳೂರು, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಚ್‌ಐವಿ-ಏಡ್ಸ್ ಜಾಗೃತಿಗೆ ಱರೆಡ್ ರಿಬ್ಬನ್ ರನ್-ಯೂತ್ ಫಾರ್ ಎಚ್‌ಐವಿ-ಏಡ್ಸ್ ಘೋಷಣೆಯೊಂದಿಗೆ ರವಿವಾರ ನಗರದಲ್ಲಿ ವಿದ್ಯಾರ್ಥಿಗಳ ಮ್ಯಾರಥಾನ್ ಸ್ಪರ್ಧೆ ನಡೆಯಿತು.

ನಗರದ ಮಂಗಳಾಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ಹಸಿರು ನಿಶಾನೆ ತೋರಿದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ನೆಹರೂ ಯುವಕೇಂದ್ರ ಆಡಳಿತ ಅಧಿಕಾರಿ ಜಗದೀಶ್ ಕೆ., ಜಿಲ್ಲಾ ಯುವಜನ ಸಬಲೀಕರಣ ಇಲಾಖೆ ಸಹ ನಿರ್ದೇಶಕ ಪ್ರದೀಪ್ ಡಿಸೋಜ, ಮಂಗಳೂರು ವಿವಿ ರಾಷ್ಟ್ರೀಯ ಸೇವಾಯೋಜನೆ ಮಂಗಳೂರು ಕಾರ್ಯ ಕ್ರಮ ಅನುಷ್ಠಾನ ಅಧಿಕಾರಿ ಡಾ.ಶೇಷಪ್ಪ ಕೆ. ಭಾಗವಹಿಸಿದ್ದರು.

*ಮಹಿಳಾ ವಿಭಾಗ ಸ್ಪರ್ಧೆಯಲ್ಲಿ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶ್ರೇಯಾ (ಪ್ರಥಮ), ವಿವೇಕಾನಂದ ಕಾಲೇಜಿನ ವಿದ್ಯಾ (ದ್ವಿತೀಯ), ಸಂತ ಅಲೋಶಿಯಸ್ ಕಾಲೇಜಿನ ವಿಸ್ಮಯಾ ಶೆಟ್ಟಿ (ತೃತೀಯ) ಬಹುಮಾನ ಪಡೆದರು.

*ಪುರುಷರ ವಿಭಾಗದಲ್ಲಿ ಪುತ್ತೂರು ಸ್ವಾಮಿ ವಿವೇಕಾನಂದ ಕಾಲೇಜಿನ ರಂಗಣ್ಣ (ಪ್ರಥಮ), ಕೆವಿಜಿ ಸುಳ್ಯ ಕಾಲೇಜಿನ ತಿಶಾನ್ ಮಾದಪ್ಪ (ದ್ವಿತೀಯ), ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ಷಯ (ತೃತೀಯ) ಬಹುಮಾನ ಪಡೆದರು. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಕ್ರಮ ಮೇಲ್ವಿಚಾರಕ ಮಹೇಶ್ ವಂದಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News