ಮಲ್ಲಾರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಿಶಾನಾ ರಾಷ್ಟ್ರ ಮಟ್ಟದ ಪುರಸ್ಕಾರಕ್ಕೆ ಆಯ್ಕೆ
ಕಾಪು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನಲ್ಲಿ ನಡೆದ ಇನ್ಸ್‍ಪಯರ್ ಅವಾರ್ಡ್ ಮನಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾಪುವಿನ ಮಲ್ಲಾರು ಸರಕಾರಿ ಸಂಯುಕ್ತ ಪ್ರೌಢ ಶಾಲೆ ವಿದ್ಯಾರ್ಥಿನಿ ಬೇಬಿ ರಿಶಾನ ಕರ್ನಾಟಕದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇವರು ತಯಾರಿಸಿದ “ಮನೆಯಲ್ಲಿ ಉಪಯೋಗಿಸಬಹುದಾದ ದಹನಕಾರಕ" ಮಾದರಿಗೆ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಅವಕಾಶ ದೊರಕಿದೆ. ವಿದ್ಯಾರ್ಥಿನಿ 2023ರ ಅಕ್ಟೋಬರ್ 9ರಿಂದ 11ರವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕವನ್ನು ಪ್ರತಿನಿಧಿಸುವರು. ರಿಶಾನಾಳೊಂದಿಗೆ ಮಾರ್ಗದರ್ಶಕರಾಗಿ ನೋಡಲ್ ಶಿಕ್ಷಕಿ ಜೋಯ್ಸ್ ಎಮ್ ಅಕ್ಟೋನ್ಸೂರವರು ಭಾಗವಹಿಸಲಿರುವರು.
ಈ ಸಾಧನೆಗೆ ಉಡುಪಿ ಜಿಲ್ಲಾ ಉಪನಿರ್ದೆಶಕ ಕೆ.ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಅಶೋಕ್ ಕಾಮತ್, ಜಿಲ್ಲಾ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಹಾಗೂ ಸ್ಪರ್ಧೆಯ ಜಿಲ್ಲಾ ನೋಡಲ್ ಸುಬ್ರಹ್ಮಣ್ಯ, ಶಾಲಾ ಮುಖ್ಯ ಶಿಕ್ಷಕಿ ವೀಣಾ ಹಾಗೂ ಶಿಕ್ಷಕ ಮತ್ತು ವಿದ್ಯಾರ್ಥಿ ವೃಂದ, ಎಸ್‍ಡಿಎಮ್‍ಸಿ. ಅಧ್ಯಕ್ಷರು ಹಾಗೂ ಸದಸ್ಯರು ಸ್ಥಳೀಯ ಜನಪ್ರತಿನಿಧಿ ಗಳು, ಪೋಷಕರು ಶುಭ ಹಾರೈಸಿದರು.