×
Ad

ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ಚುನಾವಣೆ

Update: 2025-06-24 16:27 IST

ಮಂಗಳೂರು: ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸದ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ದ ನೂತನ ಸಮಿತಿಗೆ ಚುನಾವಣೆ ಪ್ರಕ್ರಿಯೆಯು "ಉತ್ತಮ ಸಮಾಜದ ಉದಾತ್ತ ಪ್ರಜೆಗಳಾಗೋಣ" ಎಂಬ ಸಂದೇಶದೊಂದಿಗೆ ನಡೆಯಿತು.

ಮದ್ರಸ ಪ್ರಾಂಶುಪಾಲರಾದ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿ ನೇತೃತ್ವದಲ್ಲಿ ಗ್ರ್ಯಾಂಡ್ ಅಸೆಂಬ್ಲಿ ನಡೆಸಲಾಯಿತು. ಬಳಿಕ ಚುನಾವಣಾ ಅಧಿಕಾರಿ ಹಾಫಿಲ್ ಇಸ್ಮಾಯಿಲ್ ಹನೀಫಿ ಕಂಚಿಲರ ನೇತೃತ್ವದಲ್ಲಿ ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಆಡಳಿತ ಸಮಿತಿಯ ಮಾರ್ಗದರ್ಶನದಲ್ಲಿ ಯಶಸ್ವಿಗಾಗಿ ಚುನಾವಣೆ ನಡೆಯಿತು.

ಮಾದ್ಯಮ,ಮೀಡಿಯಾ, ಮಿಲಿಟರಿ ಝಡ್ ,ಹೆಲ್ಪ್ ಡೆಸ್ಕ್ ,ವಿಶೇಷ ಮೆರುಗು ನೀಡಿತ್ತು.

ಸದ್ರಿ ಚುನಾವಣೆಯು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಚಲಾವಣೆಗೆ ಸ್ಫೂರ್ತಿಯಾಗಲಿದೆ ಮತ್ತು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದೀಯಾಗುವ ಮೂಲಕ ಉತ್ತಮ ಸಮಾಜದ ಉದಾತ್ತ ಪ್ರಜೆಗಳು ಆಗಲಿದ್ದಾರೆ ಎಂದು ಸ್ಥಳೀಯ ಖತೀಬರೂ, SJM ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ K.H.U ಶಾಫಿ ಮದನಿ ಅಲ್ ಅಝ್ಹರಿ ಚುನಾವಣೆಯ ಮುನ್ನ ನಡೆದ ಮುನ್ನುಡಿ ಭಾಷಣದಲ್ಲಿ ತಿಳಿಸಿದರು.

18 ಅಭ್ಯರ್ಥಿಗಳು 4 ಕ್ಯಾಬಿನೆಟ್ ,149 ಮತದಾರರು ಮತ ಚಲಾಯಿಸುವ ಮೂಲಕ 596 ಮತ ಚಲಾವಣೆಯಾಗಿದ್ದು ಬುಧವಾರ ಸಂಜೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News