×
Ad

ಎಲ್ಎಸ್ ಡಿ ಮೆತಫಿಟಮೈನ್ ಡ್ರಗ್ಸ್ ಮಾರಾಟ: ಇಬ್ಬರ ಬಂಧನ

Update: 2023-12-05 13:13 IST

ಮಂಗಳೂರು, ಡಿ.5: ಉಳ್ಳಾಲದ ಪೆರ್ಮನ್ನೂರು ಗ್ರಾಮದ ಸಂತೋಷನಗರ ಬಳಿ 132 ಗ್ರಾಂ ತೂಕದ ಮೆತಫಿಟಮೈನ್ ಮತ್ತು 250 ಎಲ್ಎಸ್ ಡಿ ಸ್ಟ್ಪಾಂಪ್‌ ಗ ಳನ್ನು ಅಕ್ರಮವಾಗಿ ಸಾಗಾಟ- ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಶಿಶಿರ್ ದೇವಾಡಿಗ ಹಾಗೂ ಶುಶಾನ್ ಎಲ್. ಎಂದು ಗುರುತಿಸಲಾಗಿದ್ದು, ಬಂಧಿತರಿಂದ ನಿಷೇಧಿತ ಡ್ರಗ್ಸ್ ಜತೆಗೆ ಮಾರಕಾಯುಧಗಳು, 3.70 ಲಕ್ಷ ರೂ. ನಗದು, ಸ್ವಿಫ್ಟ್ ಕಾರು ಸೇರಿ ಒಟ್ಟು 14.01 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶವಪಡಿಸಿಕೊಳ್ಳಲಾಗಿದೆ.

ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್. ನಾಯಕ್ ಅವರ ನೇತೃತ್ವದಲ್ಲಿ ಆ್ಯಂಟಿ ಡ್ರಗ್ಸ್ ತಂಡದ ಪಿಎಸ್ಐ ಪುನೀತ್ ಗಾಂವ್ಕರ್, ಉಳ್ಳಾಲ ಠಾಣಾ ಪಿಎಸ್ಐ ಸಂತೋಷ್ ಕುಮಾರ್ ಡಿ, ಹಾಗೂ ಸಿಬ್ಬಂದಿ ಸಾಜು ನಾಯರ್, ಮಹೇಶ್, ಶಿವಕುಮಾರ್, ಅಕ್ಬರ್ ಯಡ್ರಾಮಿಯವರು ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News