ಧರ್ಮಸ್ಥಳ ಪ್ರಕರಣ: ಮುಂದುವರಿದ ಎಸ್ಐಟಿ ತನಿಖೆ
Update: 2025-10-11 23:34 IST
ಬೆಳ್ತಂಗಡಿ: ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಎಸ್.ಕೆ.ಮೆಮೋರಿಯಲ್ ಹಾಲ್ ಕಟ್ಟಡದ ಮೊದಲ ಮಹಡಿಯಲ್ಲಿರುವ ಖಾಸಗಿ ದಂತ ಚಿಕಿತ್ಸಾಲಯಕ್ಕೆ ಎಸ್ಐಟಿ ತಂಡ ಜೊತೆ ಎಫ್ಎಸ್ಎಲ್ ವಿಭಾಗದ ಸೋಕೊ ತಂಡದೊಂದಿಗೆ ತೆರಳಿ ಇಲ್ಲಿನ ವೈದ್ಯರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸಿದ್ದಾರೆ.
ಸುಮಾರು 2 ಗಂಟೆ ಕಾಲ ಅಧಿಕಾರಿಗಳು ವೈದ್ಯರಿಂದ ಮಾಹಿತಿ ಪಡೆಯುವ ಕಾರ್ಯ ನಡೆಸಿದ್ದಾರೆ. ಬಂಗ್ಲೆಗುಡ್ಡದಲ್ಲಿ ಸಿಕ್ಕಿರುವ ತಲೆಬುರುಡೆಗಳೊಂದಿಗೆ ಹಲ್ಲುಗಳು ಲಭಿಸಿದ್ದು, ಇದೇ ವಿಚಾರವಾಗಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದಿರುವುದಾಗಿ ತಿಳಿದು ಬಂದಿದೆ. ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ಪತ್ತೆಯಾಗಿರುವ 9 ಮಾನವ ಅವಶೇಷಗಳ ಮೂಲವನ್ನು ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿಯುತ್ತಿದೆ.