×
Ad

ಸೋಮೇಶ್ವರ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2025-07-18 14:43 IST

ಉಳ್ಳಾಲ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಆಶ್ರಯಕಾಲೊನಿಯ ನಿವಾಸಿ ಕೇಶವ ಶೆಟ್ಟಿ(64 ) ಅವರ ಮೃತದೇಹ ಶುಕ್ರವಾರ ಮಧ್ಯಾಹ್ನ ವೇಳೆಗೆ ಉಚ್ಚಿಲ ಹೊಳೆಯಲ್ಲಿ ಪತ್ತೆಯಾಗಿದೆ.

ಜು.16 ರಂದು ಕೇಶವ ಶೆಟ್ಟಿ ನಾಪತ್ತೆ ಆಗಿದ್ದರು. ಅವರ ಕೊಡೆ ಪಿಲಾರ್ ಹೊಳೆಯ ಬದಿಯಲ್ಲಿ  ಪತ್ತೆಯಾಗಿತ್ತು.  ಈ ಹಿನ್ನೆಲೆಯಲ್ಲಿ ಕೇಶವ ಶೆಟ್ಟಿ ಅವರ ಪತ್ತೆಗಾಗಿ ಹೊಳೆಯ  ಉದ್ದಕ್ಕೂ ಕಾರ್ಯಾಚರಣೆ ನಡೆಸಲಾಗಿದ್ದು, ಶುಕ್ರವಾರ ಮಧ್ಯಾಹ್ನ ವೇಳೆಗೆ ಅವರು ಬಿದ್ದ ಜಾಗದಿಂದ ಸುಮಾರು 10ಕಿಲೋಮೀಟರ್ ದೂರದಲ್ಲಿರುವ ಉಚ್ಚಿಲ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಘಟನಾ ಸ್ಥಳದಲ್ಲಿ ಸ್ಥಳದಲ್ಲಿ ತಹಶೀಲ್ದಾರ್, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News