×
Ad

SSF ದ.ಕ. ಜಿಲ್ಲಾ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

Update: 2025-02-05 22:51 IST

ಮಂಗಳೂರು: 2025-27ರ ಅವಧಿಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯ ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.

ಫೆ.1 ಮತ್ತು 2ರಂದು ಮರ್ಕಝ್ ಕೈಕಂಬ ಸಮಸ್ಥೆಯಲ್ಲಿ ನಡೆದ ‘ಸರ್ ಹಿಂದ್ ಕಾನ್ಕ್ಲೇವ್' ಕ್ಯಾಂಪ್ ನಲ್ಲಿ ಐನೂರರಷ್ಟು ವಿದ್ಯಾರ್ಥಿಗಳು ಪಾಳ್ಗೊಂಡಿದ್ದರು. ಪ್ರಸ್ತುತ ಕ್ಯಾಂಪ್ ನ ಸಮಾರೋಪ ಸಮಾರಂಭದಲ್ಲಿ ನೂತನ ಸಮಿತಿಯನ್ನು ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ.ರೋಡ್ ಘೋಷಿಸಿದರು. ಅಧ್ಯಕ್ಷರಾಗಿ ರವೂಫ್ ಹಿಮಮಿ ಸಖಾಫಿ ಸುರತ್ಕಲ್, ಉಪಾಧ್ಯಕ್ಷರಾಗಿ ಸಿನಾನ್ ಸಖಾಫಿ ಅಜಿಲಮೊಗರು, ಪ್ರ. ಕಾರ್ಯದರ್ಶಿಯಾಗಿ ನೌಫಲ್ ಕಟ್ಟತ್ತಿಲ, ಫಿನಾನ್ಶಿಯಲ್ ಕಾರ್ಯದರ್ಶಿಯಾಗಿ ಖಲೀಲ್ ಅಬ್ಬೆಟ್ಟು ಮೂಡಬಿದ್ರೆ, ಹಾಗು ಕಾರ್ಯದರ್ಶಿಗಳಾಗಿ ನೌಫಲ್ ಅಹ್ಸನಿ ಕಿನ್ಯ, ಶಾಕಿರ್ Mse ಬಜ್ಪೆ, ನೌಸೀಫ್ ಪಂಜಿಮೊಗರು, ಅಝ್ಮಲ್ ಕಾವೂರು, ನೌಶಾದ್ ಮದನಿ ಮುಡಿಪು, ಝೈನುದ್ದೀನ್ ಇರಾ, ಮುನೀರ್ ಕಲ್ಮಿಂಜ, ಇಜಾಝ್ ಪಜೀರ್ , ಮುಸ್ತಫಾ ಕೆ.ಸಿ ರೋಡ್, ಆಯ್ಕೆಗೊಂಡರು. ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ಇತರ 12 ಮಂದಿಯನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News