ಎಸೆಸೆಲ್ಸಿ ಪರೀಕ್ಷೆ: ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದ ಅಝ್ಕಾ ಕತೀಜಾ
Update: 2025-05-03 16:32 IST
ಮಂಗಳೂರು : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಝ್ಕಾ ಕತೀಜಾ ಕುನ್ನಿಲ್ 622 (ಶೇ.99.52) ಅಂಕ ಪಡೆದು ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದಿದ್ದಾರೆ.
ಇವರು ಎಸ್.ವಿ.ಸಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳದ ವಿದ್ಯಾರ್ಥಿನಿಯಾಗಿದ್ದು, ಅಬ್ದುಲ್ ಅಝೀಝ್ (ಆಸಿಫ್) ಕುನ್ನಿಲ್ ಮತ್ತು ಕೌಸರ್ ಅವರ ಪುತ್ರಿ.