ಸ್ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು: ಬಜಾಲ್ ಪಕ್ಕಲಡ್ಕದ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ವತಿಯಿಂತ 2024-25 ಶೈಕ್ಷಣಿಕ ವರ್ಷದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಸ್ನೇಹ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ಹೆತ್ತವರ ಸಭೆ ಮರ್ಹೂಮ್ ಇಬ್ರಾಹಿಂ ಸಈದ್ ಸಭಾಂಗಣದಲ್ಲಿ ನಡೆಯಿತು.
ಅತಿಥಿಯಾಗಿ ಸೈಂಟ್ ಆ್ಯನ್ಸ್ ಡಿ.ಎಡ್ ಕಾಲೇಜಿನ ಅತಿಥಿ ಶಿಕ್ಷಕ ಉಮೇಶ್ ಕಾರಂತ್, ಮೀಫ್ ಕಾರ್ಯದರ್ಶಿ ರಿಯಾಝ್ ಅಹ್ಮದ್, ಜನರೇಷನ್ ನೆಕ್ಸ್ಟ್ ಅಬಾಕಸ್ ಇದರ ಸ್ಥಾಪಕ ರಾಜ್ ಭಾಗವಹಿಸಿದರು.
ಮುಖ್ಯ ಶಿಕ್ಷಕಿ ಖುರೇಷಾ ನುಶ್ರತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀಫ್ ವತಿಯಿಂದ ಪ್ರಕಟಿಸಿದ ಯುಪಿಎಸ್‌ಸಿ ಮಾರ್ಗದರ್ಶಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ರಾಜ್ ಅವರ ತಂಡ ಸ್ಪೀಡ್ ಮ್ಯಾತ್ಸ್‌ನ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ವಿವರಿಸಿದರು. 620 ಅಂಕ ಗಳಿಸಿ ಶಾಲೆಗೆ ಟಾಪರ್ ಆದ ಸುಮಯ್ಯ ನುಹಾ, 602 ಅಂಕ ಪಡೆದು ದ್ವಿತೀಯ ಟಾಪರ್ ಅಹ್ಮದ್ ಇವಾಝ್ ಬುಖಾರಿ, 589 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ ಖತೀಜಾ ಸಝ್ವೀನಾಳನ್ನು ಸನ್ಮಾನಿಸಲಾಯಿತು. ಡಿಸ್ಟಿಂಕ್ಷನ್ ಪಡೆದ ವರು ಮತ್ತು ಸಬ್ಜೆಕ್ಟ್ ಟಾಪರ್ಸ್‌ಗಳನ್ನು ಹಾಗೂ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದವರನ್ನು ಗೌರವಿಸಲಾಯಿತು.
ಗಫೂರ್ ಕುಳಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮುಹಮ್ಮದ್ ಪರ್ವೀಝ್, ಪಿಟಿಎ ಅಧ್ಯಕ್ಷ ಪಿ.ಬಿ. ಮುಹಮ್ಮದ್ ಮಾತನಾಡಿದರು. ಶಾಹಿದ್ ಅಹ್ಮದ್ ಕಿರಾಅತ್ ಪಠಿಸಿದರು. ಶಿಕ್ಷಕಿಯರಾದ ಖನೀಝ್ ಫಾತಿಮಾ ಸ್ವಾಗತಿಸಿದರು. ನಾಗರತ್ನ ನೀತಿ ನಿಯಮ ವಾಚಿಸಿದರು. ಪಾವನಾ ಮತ್ತು ಅಶೀರುದ್ದೀನ್ ಸಾರ್ತಬೈಲ್ ಸನ್ಮಾನ ಕಾರ್ಯಕ್ರಮ ನೆರೆವೇರಿಸಿದರು. ಸಂಚಾಲಕ ಯೂಸುಫ್ ಪಕ್ಕಲಡ್ಕ ವಂದಿಸಿದರು. ಫೌಝಿಯಾ ಕಾರ್ಯಕ್ರಮ ನಿರೂಪಿಸಿದರು.