ಶಾಲಾ ಆಡಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ : ಶಶಿಧರ್ ಡಿ. ಡಿ. ಪಿ. ಐ.
ಉಳ್ಳಾಲ: ಸರಕಾರವು ಇಂದು ಸರಕಾರಿ ಶಾಲೆಗಳ ಎಲ್ಲಾ ವ್ಯವಸ್ಥೆಗಳೊಂದಿಗೆ ಉತ್ತಮವಾದ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ತನ್ನ ಕನ್ನಡ ಮಾಧ್ಯಮ ಶಾಲೆಗಳಿಗೆ ಬಹಳಷ್ಟು ವ್ಯವಸ್ಥೆಯನ್ನು ಮಾಡುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶಶಿಧರ್ ರವರು ಹೇಳಿದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೇಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢ ಶಾಲೆಗಳ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಈ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಉಚಿತ ಬಸ್ಸಿನ ವ್ಯವಸ್ಥೆ, ಉಚಿತ ಸಮವಸ್ತ್ರ ಹಾಗು ಇತರ ಶೈಕ್ಷಣಿಕ ಸಲಕರಣೆಯನ್ನು ಒದಗಿಸುವುದು ಶ್ಲಾಘನೀಯ ಎಂದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜನಾಬ್ ಬಿ. ಜಿ. ಹನೀಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂದಲ್ಲಿ ಯುವ ಉದ್ಯಮಿ ಅಲೈನ್ಸ್ ಪ್ರಾಪರ್ಟಿಸ್ ಮಾಲಕರಾದ ಹನೀಫ್ ಮೈಸೂರ್, ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಯುವ ವೇದಿಕೆ ಅಧ್ಯಕ್ಷ ಅನಿಲ್ ದಾಸ್ ಉಪನಿರ್ದೇಶಕರಾದ ಶ್ರೀ ಶಶಿಧರ್ ರವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಧಿಕಾರಿ ಈಶ್ವರ್ ಹೆಚ್. ಆರ್., ಸಮನ್ವಯಧಿಕಾರಿ ತಹಶೀನ, ಮಸ್ಜಿದ್ ಆಲ್ ಕರೀಮ್ ನ ಅಧ್ಯಕ್ಷರಾದ ಜನಾಬ್ ಹಾಜಿ ಮೊಹಮ್ಮದ್ ತ್ವಾಹಾ, ಶಾಲಾ ಸಂಚಾಲಕರಾದ ಇಸ್ಮಾಯಿಲ್ ಹಾಜಬ್ಬಾ, ಟ್ರಸ್ಟ್ ಕೋಶಾಧಿಕಾರಿ ಅಬೂಬಕ್ಕರ್, ಶಾಲಾಭಿವೃದ್ಧಿ ಸದಸ್ಯ ಅಲ್ತಾಫ್ ಯು. ಹೆಚ್., ಕರೀo ಯು. ಹೆಚ್., ಸಿ. ಆರ್.ಪಿ. ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಕೆ. ಎo. ಕೆ. ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಪ್ನಾರವರು ವಂದಿಸಿದರು. ಶಿಕ್ಷಕಿಯಾರಾದ ಶಕೀಲ, ಅಸ್ಮಾ ಮತ್ತು ವಿದ್ಯಾಶ್ರೀ ರಾವ್ ರವರು ವಿಜೇತರ ಪಟ್ಟಿಯನ್ನು ವಾಚಿಸಿದರು.