ನಾಲ್ಕನೇ ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್: ಇಫ್ಝಾ ಖದೀಜಾ ಹಲೀಮಾಗೆ ಅವಳಿ ಚಿನ್ನ
ಮಂಗಳೂರು, ಡಿ.23: ಮಹಾರಾಷ್ಟ್ರದ ಅಂಧೇರಿ ಕ್ರೀಡಾ ಸಂಕೀರ್ಣದಲ್ಲಿ ಇತ್ತೀಚೆಗೆ ನಡೆದ 4ನೇ ಅಂತರ್‌ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 7-9 ವರ್ಷ ತನಕದ (ಆರೇಂಜ್- ಗ್ರೀನ್ ಬೆಲ್ಟ್) ಬಾಲಕಿಯರ ಕಟಾ ಮತ್ತು ಕುಮಿಟಿ ವಿಭಾಗಗಳಲ್ಲಿ ಇಫ್ಝಾ ಖದೀಜಾ ಹಲೀಮಾ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ಕರಾಟೆ ಅಸೋಸಿಯೇಷನ್ (ರಿ) ಮತ್ತು ಸಿಎಂಎಎ ಆಯೋಜಿಸಿದ್ದ ಈ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ಸೈಂಟ್ ಅಲೋಶಿಯಸ್ ಗೊನ್ಜಾಗಾ ಸಿಬಿಎಸ್‌ಇ ಸ್ಕೂಲ್‌ನ ಇಫ್ಝಾ ಖದೀಜಾ ಹಲೀಮಾ ಅವರು ಭಾರತವನ್ನು ಪ್ರತಿನಿಧಿಸಿದ್ದರು.
ಇಫ್ಝಾ ಖದೀಜಾ ಹಲೀಮಾ ಅವರು ಮಂಗಳೂರಿನ ಇಬ್ರಾಹೀಂ ಖಲೀಲ್ ಡಾ.ಆರಿಫಾ ಹಲೀಮಾ ದಂಪತಿಯ ಪುತ್ರಿ.
ಕೋಚ್ ಕ್ಯೋಶ್ ಮುಹಮ್ಮದ್ ನದೀಮ್ ಅವರ ಶೋರಿನ್-ರ್ಯು ಇನ್‌ಸ್ಟ್ಟಿಟ್ಯೂಟ್ ಆಫ್ ಕರಾಟೆ ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಈಕೆ ಈ ಹಿಂದೆ ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅವಳಿ ಚಿನ್ನದ ಪದಕಗಳನ್ನು ಜಯಿಸಿದ್ದರು.