ಈಜು ಸ್ಪರ್ಧೆ ಯಲ್ಲಿ ಬೋಳಾರ ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆಯ ಸುಜಾತಾ ಏಕನಾಥ್ ಗೆ 2 ಚಿನ್ನ,1 ಬೆಳ್ಳಿ ಪದಕ
Update: 2025-01-19 13:38 IST
ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜು ಕೊಳದಲ್ಲಿ ವಿ ವನ್ ಅಕ್ವಾ ಸೆಂಟರ್ ಇವರು ಆಯೋಜಿಸಿದ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಯಲ್ಲಿ ಬೋಳಾರ ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆಯ ಸುಜಾತಾ ಏಕನಾಥ್ ಇವರು 2 ಚಿನ್ನ ಮತ್ತು 1 ಬೆಳ್ಳಿ ಪದಕ ಜಯಿಸಿದ್ದಾರೆ.
ಮಂಗಳೂರು ಸಮುದ್ರ ಈಜುಗಾರರ ತಂಡದ ಸದಸ್ಯರಾಗಿರುವ ಇವರು 50 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರಥಮ, 50 ಮೀ. ಫ್ರೀ ಸ್ಟೈಲ್ ನಲ್ಲಿ ಪ್ರಥಮ ಮತ್ತು 50 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಸುಜಾತಾ ಅವರಿಗೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಬಿ. ಕೆ. ನಾಯ್ಕ್ ತರಬೇತಿ ನೀಡಿರುತ್ತಾರೆ.