×
Ad

ಸುಳ್ಯ: ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ; ಅಪಾಯದಿಂದ ಪಾರಾದ ಬೈಕ್ ಸವಾರ

Update: 2023-11-10 20:31 IST

ಸುಳ್ಯ : ಬೆಳಗ್ಗಿನ ಜಾವ ಜಾಲ್ಸೂರು - ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಎದುರಿನಿಂದ ಬಂದ ಬೈಕ್ ಸವಾರರು ಕೂದಳೆಲೆ ಅಂತರದಿಂದ ಪಾರಾದ ಘಟನೆ ಪಂಜಿಕಲ್ಲಿನಲ್ಲಿ ಶುಕ್ರವಾರ ನಡೆದಿದೆ.

ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಪರಿಸರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿಕರ ತೋಟಗಳಿಗೆ ಹಾನಿ ಮಾಡುತ್ತಿದ್ದು, ಶುಕ್ರವಾರ ಕಾಡಾನೆಯೊಂದು ಪಂಜಿಕಲ್ಲಿನ ಬಳಿ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷಗೊಂಡಿದೆ. ಅಂತರ್‌ ರಾಜ್ಯ ರಸ್ತೆಯಲ್ಲಿ ಆನೆ ನಡೆದುಕೊಂಡು ಬರುತ್ತಿದ್ದ ವೇಳೆ ಈ ರಸ್ತೆಯಾಗಿ ಬಂದ ಬೈಕ್ ಸವಾರರು ತಿರುವಿನಲ್ಲಿ ಕೂದಳೆಲೆ ಅಂತರದಲ್ಲಿ ಕಾಡಾನೆಯ ದಾಳಿಯಿಂದ ಪಾರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News