×
Ad

ಡಿ.6ರಿಂದ 10ರ ವರೆಗೆ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ

Update: 2023-11-30 15:18 IST

ಮಂಗಳೂರು, ನ.30: ಬಾಯ್‌ರೆನ್ ಡಾನ್ಸ್ ಅಕಾಡೆಮಿ 23ನೆ ವರ್ಷದ ಸಂಭ್ರಮದ ಅಂಗವಾಗಿ ಡಿ. 6ರಿಂದ 10ರವರೆಗೆ ತಣ್ಣೀರುಬಾವಿಯಲ್ಲಿ ಬೀಚ್ ಉತ್ಸವ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯಸ್ಥ ಕಿಶೋರ್ ಕುಮಾರ್ ತಿಳಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೀಚ್ ಉತ್ಸವದಲ್ಲಿ ಆಹಾರ ಉತ್ಸವ, ಅಟೋ ಕಾನಿರ್ವಲ್, ಅಮ್ಯೂಸ್ಮೆಂಟ್ ಪಾರ್ಕ್ ಜತೆಗೆ ‌ಡಿಜಿಟಲ್ ಸೌಂಡ್ಸ್, ಲೈಟ್ಸ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಮ್ಯೂಸಿಕಲ್ ನೈಟ್ಸ್, ನೃತ್ಯ ಹಾಗೂ ಫ್ಯಾಶನ್ ಶೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕನ್ನಡ ಹಾಗೂ ತುಳು ಚಿತ್ರರಂಗದ ಹೆಸಾಂತ ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಗೋಷ್ಟಿಯಲ್ಲಿ ಪವನ್, ಮುರಳೀಧರ್ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News