ಅಸಹಾಯಕರ ಆಸರೆ ಖಿದ್ಮತ್ ಫೌಂಡೇಶನ್ ವಿಟ್ಲ ಇದರ ಐದನೇ ವಾರ್ಷಿಕ ಸಂಗಮ
ವಿಟ್ಲ : ಜನರಿಗೆ ನಿಷ್ಕಳಂಕ ಕಾರುಣ್ಯ ಸೇವೆಗಳು ಮಾಡುವವರು ಭಾಗ್ಯವಂತರು. ಅವರು ಸರ್ವಶಕ್ತನಾದ ಸೃಷ್ಟಿಕರ್ತನ ಪ್ರೀತಿಗೆ ಪಾತ್ರರು, ಅವರಿಂದ ಮಾತ್ರ ಇಂತಹ ಸೇವೆಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಖ್ಯಾತ ಆಧ್ಯಾತ್ಮಿಕ ಗುರು ಮಹಮೂದುಲ್ ಫೈಝಿ ವಾಲೆ ಮುಂಡೋವು ಉಸ್ತಾದ್ ನುಡಿದರು
ಅವರು ವಿಟ್ಲದಲ್ಲಿ ನಡೆದ ಅಸಹಾಯಕರ ಆಸರೆ ಖಿದ್ಮತ್ ಫೌಂಡೇಶನ್ ವಿಟ್ಲ ಇದರ ಐದನೇ ವಾರ್ಷಿಕ ಸಂಗಮದಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದರು.
ದ.ಕ ಜಿಲ್ಲಾಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮುಹಮ್ಮದ್ ಮಾತನಾಡಿದರು. ಚಾರಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಅಧ್ಯಕ್ಷತೆ ವಹಿಸಿದ್ದರು. ಪೆರುವಾಯಿ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಷರೀಫ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಚಾರಿಟಿ ಉಪಾಧ್ಯಕ್ಷ ಕಾಸಿಂ ಸಖಾಫಿ ಅಳಕೆ ಮಜಲು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಬ್ದುಲ್ ರಶೀದ್ ಮೈ ರ ಹಮೀದ್ ಹಾಜಿ ಸೇರಾಜೆ, ಮಜೀದ್ ಕನ್ಯಾನ ಎನ್ ಕೆ ಮೂಸ ಒಕ್ಕೆತ್ತೋರು ರಝಾಕ್ ಫುರ್ಕಾನಿ , ಅಬ್ಬಾಸ್ ಮದನಿ ಹಸೈನಾರ್ ನೆಲ್ಲಿಗುಡ್ಡೆ, ಪತ್ರಕರ್ತ ಮುಹಮ್ಮದ್ ಅಲಿ ವಿಟ್ಲ, ಮಜೀದ್ ಕನ್ಯಾನ ಯು ಟಿ ಅಲಿ ಪರಿಯಲ್ತಡ್ಕ ಸಿದ್ದಿಕ್ ಪೆರುವಾಯಿ ಅಬ್ಬಾಸ್ ದಾಸರಬೆಟ್ಟು ಶರೀಫ್ ಫಿಶ್ ಹಾಜಿ ಇಸ್ಮಾಯಿಲ್ ಶಾಫಿ ವಿಟ್ಲ ಡಿ ಕೆ ಅಬ್ದುಲ್ ಖಾದರ್ ಶಾಕಿರ್ ಅಳಕೆ ಮಜಲು ಹಮೀದ್ ಹಾಜಿ ಕಾನತಡ್ಕ ರಹೀಂ ಹಾಜಿ ಬೈರಿಕಟ್ಟೆ ಹಮೀದ್ ಚಂದಳಿಕೆ ಮೊದಲಾದವರು ಅತಿಥಿಯಾಗಿ ಭಾಗವಹಿಸಿದರು.
ಪ್ರಧಾನ ಕಾರ್ಯದರ್ಶಿ ಸಲೀಂ ಹಾಜಿ ಸ್ವಾಗತಿಸಿ ಇಬ್ರಾಹಿಂ ಪುರ್ಕಾನಿ ವಂದಿಸಿದರು.