ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮಹತ್ವದ್ದು: ಡಾ.ಪ್ಯಾಸ್ಕಲ್ ಎನ್.ಟೈರೆಲ್
ಪಿ.ಎ.ಕಾಲೇಜಿನಲ್ಲಿ ʼʼಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆʼʼ ಕಾರ್ಯಾಗಾರ ಉದ್ಘಾಟನೆ
ಕೊಣಾಜೆ: ಕೃತಕ ಬುದ್ದಿಮತ್ತೆಯು ಕೇವಲ ತಾಂತ್ರಿಕ ಪ್ರಗತಿ ಮಾತ್ರವಲ್ಲ, ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚುತ್ತಿರುವ ಆರೋಗ್ಯ ರಕ್ಷಣೆ ಬೇಡಿಕೆಗಳು, ರೋಗಗಳ ಆರಂಭಿಕ ಪತ್ತೆ ಮತ್ತು ನಿಖರ ಔಷಧದಂತಹ ಸವಾಲುಗಳನ್ನು ಎದುರಿಸುವಲ್ಲಿ ಇದು ಅತ್ಯಗತ್ಯವಾದ ಸಾಧನವಾಗಿ ರೂಪುಗೊಳ್ಳುತ್ತಿದೆ ಎಂದು ಪ್ರಸಿದ್ಧ ಡೇಟಾ ವಿಜ್ಞಾನಿ, ಸಂಶೋಧಕ ಮತ್ತು ನಾವೀನ್ಯಕಾರ ಡಾ.ಪ್ಯಾಸ್ಕಲ್ ಎನ್.ಟೈರೆಲ್ ಅವರು ಹೇಳಿದರು.
ಅವರು ಪಿಎ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗಗಳ ಐಇಇಇ, ಡಬ್ಲ್ಯುಐಇ, ಐಐಸಿ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ "ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ" ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಪಂಚದಾದ್ಯಂತ ಆಧುನಿಕ ಔಷಧ ಮತ್ತು ಆರೋಗ್ಯ ವ್ಯವಸ್ಥೆಗಳ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಬೆಳೆಯುತ್ತಿರುವ ಪಾತ್ರದ ಕುರಿತು ಅಮೂಲ್ಯವಾದ ಮಾಹಿತಿಗಳನ್ನು ಅವರು ಹಂಚಿಕೊಂಡರು.
ಪ್ರಾಂಶುಪಾಲರಾದ ಡಾ.ರಮಿಸ್ ಎಂಕೆ, ಉಪ ಪ್ರಾಂಶುಪಾಲರಾದ ಡಾ.ಶರ್ಮಿಳಾ ಕುಮಾರಿ ಎಂ, ಪಿಎಇಟಿಯ ಎಜಿಎಂ ಶರ್ಫುದ್ದೀನ್, ಮಂಗಳೂರು ವಿಶ್ವವಿದ್ಯಾಲಯದ ಪಿಜಿ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಬಿ ಎಚ್ ಶೇಖರ್, ಪಿಎ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್, ಎಐಎಂಎಲ್ ವಿಭಾಗದ ಮುಖ್ಯಸ್ಥ ಡಾ.ಮುಹಮ್ಮದ್ ಝಾಕೀರ್ ಬಳ್ಳಾರಿ ಉಪಸ್ಥಿತರಿದ್ದರು.
ಗೌರವ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಎಲ್.ಶಶಿರೇಖಾ, ಮೈಸೂರಿನ ಸುಯೋಗ್ ಆಸ್ಪತ್ರೆಯ ಜನರಲ್ ಫಿಸಿಶಿಯನ್ ಡಾ.ಪೊನ್ನಪ್ಪ ಬಿ ಜಿ ಭಾಗವಹಿಸಿದ್ದರು.