×
Ad

ತುಂಬೆ : ಸೆ.11ರಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯೊಂದಿಗೆ ಸಂವಾದ ಕಾರ್ಯಕ್ರಮ

Update: 2023-09-10 21:07 IST

ಬಂಟ್ವಾಳ : ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಹಾಗೂ ತುಂಬೆ ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯವರೊಂದಿಗೆ "ಭ್ರಷ್ಟಾಚಾರ ಮುಕ್ತ ಸಮಾಜ, ಯುವ ಜನತೆಯ ಪಾತ್ರ" ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮ ಸೆ.11 ರಂದು ಬೆಳಿಗ್ಗೆ ತುಂಬೆ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾದ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಲಿದ್ದು ಜಮೀಯತುಲ್ ಫಲಾಹ್ ಸಂಸ್ಥೆಯ ಎನ್.ಆರ್.ಸಿ.ಸಿ. ಮಾಜಿ ಅಮೀರ್ ಶಾಹುಲ್ ಹಮೀದ್ ದಮಾಮ್, ಜಿಲ್ಲಾಧ್ಯಕ್ಷ ಕೆ.ಕೆ.ಸಾಹುಲ್ ಹಮೀದ್, ಅಜೀವ ಸದಸ್ಯರುಗಳಾದ ಹಾಜಿ ಪಿ.ಎಸ್.ಅಬ್ದುಲ್ ಹಮೀದ್, ಹಂಝ (ಆನಿಯಾ ದರ್ಬಾರ್) ಬಸ್ತಿಕೋಡಿ, ತುಂಬೆ ಪ.ಪೂ.ಕಾಲೇಜು ಪ್ರಾಂಶುಪಾಲ ಗಂಗಾಧರ ಆಳ್ವ ಕೆ.ಎನ್. ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News