×
Ad

ಪಂದ್ಯಾಟಗಳು ಅನ್ಯೋನ್ಯತೆಗೆ ಪೂರಕ: ಡಾ. ಅಶಿತ್ ಶೆಟ್ಟಿಯಾನ್

Update: 2023-10-17 14:37 IST

ಸುರತ್ಕಲ್, ಅ.17: ಪ್ರತಿಯೊಂದು ಚರ್ಚ್ ಗಳು ಆಯೋಜಿಸುತ್ತಿರುವ ಪಂದ್ಯಾಟಗಳು ಸಭೆ ಹಾಗೂ ಕುಟುಂಬಗಳ ಅನ್ಯೋನ್ಯತೆಗೆ ಪೂರಕವಾಗಿದ್ದು, ಸಭೆಗಳಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿ ಮಾಡಲು ಕಾರಣವಾಗಿದೆ ಎಂದು ಮಂಗಳೂರಿನ ಅಥೇನ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಅಶಿತ್ ಶೆಟ್ಟಿಯಾನ್ ನುಡಿದರು.

ಅವರು ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚ್ ವತಿಯಿಂದ ನಡೆದ ಸುಗ್ಗಿ ಹಬ್ಬದ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನ ಸಭಾ ಪಾಲಕರಾದ ರೆವೆರೆಂಡ್ ಅಮೃತ್ ರಾಜ್ ಖೊಡೆ ಅವರು ವಹಿಸಿ ಶುಭ ಹಾರೈಸಿದರು.

ಸಿಎಸ್ಐ ಕ್ರಿಸ್ತ ಕಾಂತಿ ಚರ್ಚ್ ಪಣಂಬೂರು ಇಲ್ಲಿಯ ಸಭಾ ಪಾಲಕರಾದ ರೆವೆರೆಂಡ್ ಸಂಧ್ಯಾ ಖೊಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಭಾ ಪರಿಪಾಲನ ಸಮಿತಿಯ ಸದಸ್ಯರಾದ ಆಸ್ಟಿನ್ ಕರ್ಕಡ, ವಸಂತ ಬೆರ್ನಾಡ್, ಲಾವಣ್ಯ ಕೋಟ್ಯಾನ್, ಶರ್ಲಿ ಬಂಗೇರ, ಜೇಮ್ಸ್ ಕರ್ಕಡ, ಮತ್ತು ಸಿಡ್ನಿ ಕರ್ಕಡ ಉಪಸ್ಥಿರಿದ್ದರು.

ಪಂದ್ಯಾಟ ಸಮಿತಿಯ ಕಾರ್ಯದರ್ಶಿ ರೆಮ್ಮಿ ಎಲಿಸಾ ಸಾಮುವೆಲ್ ಸ್ವಾಗತಿಸಿದರು. ಖಜಾಂಜಿ ಸುಹಾನ್ ಪಾಲನ್ನ ವಂದಿಸಿದರು. ಅಡ್ಲಿನ್ ನವ್ಯ ಪಾಲನ್ನ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News