×
Ad

ಮಂಗಳೂರು: ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ನಾಪತ್ತೆ

Update: 2025-05-30 10:35 IST

ಸಾಂದರ್ಭಿಕ ಚಿತ್ರ

ಮಂಗಳೂರು: ನಗರದ ತೋಟ ಬೆಂಗ್ರೆಯ ಅಳಿವೆ ಬಾಗಿಲು ಸಮೀಪ ನಾಡದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ನಾಪತ್ತೆಯಾದ ಘಟನೆ‌ ಗುರುವಾರ ತಡರಾತ್ರಿ ನಡೆದಿದೆ.

ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯುತ್ತಿದ್ದಾಗ ಭಾರೀ ಗಾಳಿ ಮಳೆಗೆ ದೋಣಿ ಮಗುಚಿ ಬಿತ್ತು ಎನ್ನಲಾಗಿದೆ‌. ಇದರಿಂದ ದೋಣಿಯಲ್ಲಿದ್ದ ಯಶವಂತ ಮತ್ತು ಕಮಲಾಕ್ಷ ಎಂಬವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ನಾಡ ದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೆ ಬಳಿಯ ದಡಕ್ಕೆ ಬಂದು ಬಿದ್ದಿದೆ. ನಾಡದೋಣಿ ಕೂಡ ಕಣ್ಮರೆಯಾಗಿದೆ. ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News