×
Ad

ಉಳ್ಳಾಲ: ದೇಹದಾರ್ಢ್ಯ ಪಟು ಹೃದಯಾಘಾತದಿಂದ ಮೃತ್ಯು

Update: 2025-07-04 12:45 IST

ಉಳ್ಳಾಲ : ಭಾರತ್ ಕಿಶೋರ್ ಟೈಟಲ್ ವಿಜೇತ ದೇಹದಾರ್ಢ್ಯ ಪಟು ರೈಲ್ವೇ ಉದ್ಯೋಗಿ ಜಲ್ಲಿಗುಡ್ಡೆ ನಿವಾಸಿ ಸಂತೋಷ್ ಕುಮಾರ್ ಉಳ್ಳಾಲ್ (52) ಹುಬ್ಬಳ್ಳಿಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಮೂಲತ: ಉಳ್ಳಾಲ ಉಳಿಯ ನಿವಾಸಿಯಾಗಿದ್ದ ಸಂತೋಷ್ ಕುಮಾರ್ ತೊಕ್ಕೊಟ್ಟಿನ ಶಕ್ತಿಭಾರತ್ ವ್ಯಾಯಾಮ ಶಾಲೆಯಲ್ಲಿ ತರವೇತಿ ಪಡೆದು ರಾಜ್ಯ ರಾಷ್ಟ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕರ್ನಾಟಕ ಉದಯ, ಭಾರತ್ ಕಿಶೋರ್ ಟೈಟಲ್ ವಿಜೇತರಾಗಿದ್ದರು.

ರೈಲ್ವೇ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅವರು ದೇಹದಾರ್ಢ್ಯ ಪಟುವಾಗಿ ರೈಲ್ವೇಯನ್ನು ಪ್ರತಿನಿಧಿಸಿದ್ದರು. ಮಂಗಳೂರು ರೈಲ್ವೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಹುಬ್ಬಳ್ಳಿಯಲ್ಲಿ ಸಭೆಯಲ್ಲಿ ಭಾಗವಹಿಸಲು ತನ್ನ ಸಹೋದ್ಯೋಗಿಯೊಂದಿಗೆ ತೆರಳುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದು ಬಂದಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News