ಜು.28ಕ್ಕೆ ಮುಹರ್ರಮ್ ರಜೆ ನೀಡುವ ಕುರಿತು ಉಳ್ಳಾಲ ದರ್ಗಾ ಸಮಿತಿಯಿಂದ ದ.ಕ. ಜಿಲ್ಲಾಧಿಕಾರಿಗೆ ಮನವಿ
Update: 2023-07-25 23:18 IST
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಹರ್ರಮ್ ವಿಶೇಷ ಉಪವಾಸ ದಿನ ಆಚರಿಸಲು ಅನುಕೂಲವಾಗುವಂತೆ ಸರ್ಕಾರಿ ರಜೆಯನ್ನು ಜುಲೈ 29ರ ಬದಲಾಗಿ ಜುಲೈ 28ಕ್ಕೆ ನೀಡುವಂತೆ ಬದಲಾವಣೆಗೊಳಿಸಬೇಕಾಗಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಉಳ್ಳಾಲ ದರ್ಗಾ ಸಮಿತಿ ವತಿಯಿಂದ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಮನವಿ ಸಲ್ಲಿಸಿದರು.