ಉಳ್ಳಾಲ : ಶಾಲಾ ಸಂಸತ್ತಿಗೆ ಸಾರ್ವತ್ರಿಕ ರೂಪದಲ್ಲಿ ಚುನಾವಣೆ
Update: 2025-06-23 14:22 IST
ಉಳ್ಳಾಲ :ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಸಯ್ಯದ್ ಮದನಿ ಪ್ರೌಢಶಾಲೆಯಲ್ಲಿ 2025 -26 ನೇ ಸಾಲಿಗೆ ಶಾಲಾ ಸಂಸತ್ತಿಗೆ ಸಾರ್ವತ್ರಿಕ ರೂಪದಲ್ಲಿ ಚುನಾವಣೆ ನಡೆಯಿತು.
ಮುಖ್ಯಮಂತ್ರಿ ಸ್ಥಾನಕ್ಕೆ ಮೂರು ಮಂದಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 10ನೇ ತರಗತಿಯ ಮೊಹಮ್ಮದ್ ಸಾಜ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು . ಉಪಮುಖ್ಯಮಂತ್ರಿ ಸ್ಥಾನಕ್ಕೆ ಖತೀಜತುಲ್ ಫಾಹಿಮಾ ಆಯ್ಕೆ ಆದರು. ಮತದಾನ ಯಂತ್ರದ ಮೂಲಕ ನಡೆದ ಚುನಾವಣೆ ನಡೆಸಲಾಯಿತು.
ಶಿಕ್ಷಕಿಯರಾದ ಸಪ್ನಾ ಮತ್ತು ಬಬಿತಾ ಸೇಲಿನ್ ಡಿಸೋಜಾ ಹಸೀನ್ ತಾಜ್, ರಮ್ಲಾ ಬಾನು, ಶಕೀಲಾ, ಅರ್ಪಿತ ರೈ, ವಿದ್ಯಾಶ್ರೀರಾವ್, ಶಶಿಕಲಾ,ಸುಮನ ಚುನಾವಣಾ ಅಧಿಕಾರಿಗಳಾಗಿ ಭಾಗವಹಿಸಿದ್ದರು .
ಅಸ್ಮಾ ಮಂಜನಾಡಿ,ಕುಮಾರಿ ಮೋನಿಷ , ವೀಣಾ ಶಿಸ್ತು ಪಾಲನಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು.