ಉಳ್ಳಾಲ | ಮಾದಕ ವಸ್ತು ಸೇವನೆ ಆರೋಪ : ಆರೋಪಿಯ ಬಂಧನ
Update: 2025-11-25 21:14 IST
ಸಾಂದರ್ಭಿಕ ಚಿತ್ರ | PC : gemini AI
ಉಳ್ಳಾಲ : ಮಾದಕ ವಸ್ತುವನ್ನು ಸೇವಿಸಿ, ಅಕ್ಕರೆ ಕೆರೆ ಪರಿಸರದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ವ್ಯಕ್ತಿಯೊರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಕ್ಕರೆ ಕೆರೆ ನಿವಾಸಿ ಮುಹಮ್ಮದ್ ಶಾಝಿಲ್(29) ಎಂದು ಗುರುತಿಸಲಾಗಿದೆ.
ಉಳ್ಳಾಲ ಠಾಣಾ ಪಿಎಸ್‌ಐ ಕೃಷ್ಣ ಕೆ ಹೆಚ್ ರವರು ಸಿಬ್ಬಂದಿ ಜೊತೆಯಲ್ಲಿ ಈತನನ್ನು ಬಂಧಿಸಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ