ಉಳ್ಳಾಲ | ಹಿದಾಯತ್ ನಗರ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ
Update: 2025-12-04 23:43 IST
ಉಳ್ಳಾಲ, ಡಿ.4: ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ನಲ್ಲಿ ಪ್ರತಿವಾರ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ನ 26ನೆ ವಾರ್ಷಿಕ ಕಾರ್ಯಕ್ರಮ ಇತ್ತೀಚೆಗೆ ಮಸೀದಿಯ ವಠಾರದಲ್ಲಿ ಜರಗಿತು.
ಮಸೀದಿಯ ಅಧ್ಯಕ್ಷ ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಅಧ್ಯಕ್ಷತೆ ವಹಿಸಿದ್ದರು. ಉಚ್ಚಿಲ 407 ಜುಮಾ ಮಸೀದಿಯ ಖತೀಬ್ ಹಮೀದ್ ಫೈಝಿ ಉದ್ಘಾಟಿಸಿದರು. ಮುನೀರ್ ಸಖಾಫಿ ಕೆ.ಸಿ. ರೋಡ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ಅಫ್ಳಲಿ, ಮಸೀದಿಯ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ಖಾದರ್, ಮದ್ರಸದ ಮುಖ್ಯ ಶಿಕ್ಷಕ ನೌಫಲ್ ಅಹ್ಸನಿ, ಮುಅದ್ಸಿನ್ ಶಕೂರ್ ಸಅದಿ, ಫಾರೂಕ್ ಸಅದಿ ಕೊಮರಂಗಳ, ಉಮರಬ್ಬ ಮಂಗಳೂರು, ಎನ್.ಎಸ್. ಉಮರಬ್ಬ ಮಾಸ್ಟರ್, ಅಬ್ಬಾಸ್ ಹಾಜಿ ಕೆ.ಸಿ. ರೋಡ್,ಬಾವ ಹಾಜಿ ಪಿಲಿಕೂರ್, ಕೆ.ಎಂ. ಫಾರೂಕ್ ಬಟ್ಟಪ್ಪಾಡಿ ಮತ್ತಿತರರು ಪಾಲ್ಗೊಂಡಿದ್ದರು.
ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಟಿ.ಎಚ್. ವಂದಿಸಿದರು.