ಉಳ್ಳಾಲ | ಡಿ.20ರಂದು ಮದನೀಸ್ ಅಸೋಸಿಯೇಷನ್ ಗ್ರ್ಯಾಂಡ್ ಕಾನ್ಪರೆನ್ಸ್ ಘೋಷಣಾ ಸಮಾವೇಶ
ಉಳ್ಳಾಲ: ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಕಲಿತು ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಖ.ಸಿ. ರವರ ಶಿಷ್ಯತ್ವ ಪಡೆದ ಮದನಿ ಬಿರುದು ದಾರಿಗಳ ಸಂಘಟನೆಯಾದ ಕೇಂದ್ರ ಮದನೀಸ್ ಅಸೋಸಿಯೇಷನ್ ವತಿಯಿಂದ 2026 ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಬೃಹತ್ ಮದನಿ ಸಂಗಮ ಮತ್ತು ಸಾರ್ವಜನಿಕ ಮಹಾ ಸಮ್ಮೇಳನ ದ ಘೋಷಣಾ ಸಮಾವೇಶವನ್ನು ಅಸ್ಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್ ರವರು , ಉಳ್ಳಾಲ ಮದನಿ ಅಡಿಟೋರಿಯಂ ನಲ್ಲಿ ಡಿ.20 ರಂದು ನಡೆಸಲಿದ್ದಾರೆ.
ಮದನೀಸ್ ಸ್ಟೇಟ್, ಜಿಲ್ಲಾ, ತಾಲೂಕುಗಳ ಕಾರ್ಯಕರ್ತರಿಗೆ "ಭೋದಕನ ಜೀವನ ಶೈಲಿ ಮತ್ತು ಜವಾಬ್ದಾರಿಗಳು" ಎಂಬ ವಿಷಯದಲ್ಲಿ ಮಲ್ಹರ್ ಮುದರ್ರಿಸ್ ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್ ತರಗತಿ ನಡೆಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಮದನೀಸ್ ಅಧ್ಯಕ್ಷರಾದ ಅಸ್ಸಯ್ಯಿದ್ ಅಬೂಬಕರ್ ಸಿದ್ದೀಖ್ ತಂಙಳ್ ಮುರ ಅಧ್ಯಕ್ಷತೆ ವಹಿಸಲಿದ್ದು, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಬಿ.ಜಿ.ಹನೀಫ್ ಹಾಜಿ ಉದ್ಘಾಟನೆ ನಡೆಸಲಿದ್ದಾರೆ. ದರ್ಗಾ ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಂ ಭಾಗವಹಿಸಲಿದ್ದಾರೆ.
ಇದರ ನಿರ್ವಹಣಾ ಸಮಿತಿ ನಿರ್ದೇಶಕರಾದ ಅಸ್ಸಯ್ಯಿದ್ ಅಬೂಬಕ್ಕರ್ ಸಿದ್ದೀಖ್ ತಂಙಳ್ ಅಲ್ ಮದನಿ ಮುರ, ಅಸ್ಸಯ್ಯಿದ್ ಅಶ್ರಫ್ ಅಸ್ಸಖಾಫ್ ಮದನಿ ತಂಙಳ್ ಆದೂರ್, ಚಯರ್ ಮೇನ್ ಅಸ್ಸಯ್ಯಿದ್ ಇಸ್ಮಾಯೀಲ್ ಮದನಿ ಅಲ್ ಹಾದಿ ತಂಙಳ್ ಉಜಿರೆ, ವೈಸ್ ಚಯರ್ ಮೇನ್ ಅಸ್ಸಯ್ಯಿದ್ ಹಸನ್ ಕುಂಞ ಕೋಯ ತಂಙಳ್ ಮದನಿ ಎಡರಿಕ್ಕೋಡ್, ಮೂಸಲ್ ಮದನಿ ಅಲ್ ಬಿಷಾರ, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್, ಯು.ಕೆ.ಅಬೂಬಕರ್ ಮದನಿ ಮುದುಂಗಾರುಕಟ್ಟೆ, ಸಿ.ಕೆ.ಕುಂಞಾಲನ್ ಮದನಿ ನೀಲಗಿರಿ, ಅಬ್ದುರ್ರಹ್ಮಾನ್ ಮದನಿ ಕಾಡಾಚಿರ, ಕನ್ವೀನರ್ ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಬಿ.ಟಿ.ಎಂ. ಅಬ್ಬಾಸ್ ಮದನಿ ಬಂಡಾಡಿ, ಕೂಳೂರು ಬಶೀರ್ ಮದನಿ, ನೀಲಗಿರಿ ಬಶೀರ್ ಮದನಿ, ಪಿ.ಎಂ. ಮುಹಮ್ಮದ್ ಮದನಿ ಪೂಡಲ್, ಕೆ.ಎಂ.ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ ಮತ್ತು ಸದಸ್ಯರಾಗಿ ಜಲಾಲುದ್ದೀನ್ ಮದನಿ ಉಳ್ಳಾಲ, ಆರ್.ಕೆ.ಮದನಿ ಅಮ್ಮೆಂಬಳ, ಇಸ್ಮಾಯೀಲ್ ಬುಖಾರಿ ಮದನಿ ನೂಜಿ, ಇಸ್ಮಾಯೀಲ್ ಮದನಿ ಗೂಡಲ್ಲೂರ್,ಹಸೈನಾರ್ ಮದನಿ ಕಾಂಞಗಾಡ್, ಪಿ.ಕೆ. ಮುಹಮ್ಮದ್ ಮದನಿ ಅಳಕೆ, ಯೂಸುಫ್ ಮದನಿ, ಚೆರ್ವತ್ತೂರ್ ಹಸೈನಾರ್ ಮದನಿ ಕುಂಜಿಲ, ಉಮರ್ ಮದನಿ ಮಚ್ಚಂಪಾಡಿ, ಕೆ.ಸಿ.ಎಮ್.ಅಬ್ದುಲ್ ಖಾದರ್ ಮದನಿ ಕನ್ಯಾರ ಕೋಡಿ, ಅಬ್ದುಲ್ಲ ಮದನಿ ಕುಂಜಿಲ, ಇರ್ಶಾದ್ ಮದನಿ ಮಲಪ್ಪುರಂ ಎಂಬವರನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಮದನೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.