ಮಂಗಳೂರು: 99ನೇ ʼಆಂಡ್ ನೇರ್ಚೆʼಯ ಸಮಾರೋಪ
ಮಂಗಳೂರು: ಅಶ್ಶೈಖ್ ಅಸ್ಸೆಯ್ಯಿದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ ಬಂದರ್ ರವರ 99ನೇ ʼಆಂಡ್ ನೇರ್ಚೆʼಯ ಸಮಾರೋಪ ಸಮಾರಂಭದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆ ಖಾಝಿ ಬಹುಮಾನ್ಯರಾದ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ರವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಖತ್ಮುಲ್ ಖುರಾನ್, ಸಿಲ್‌ಸಿಲ ಪಾರಾಯಣ ನಡೆಯಿತು.
ನಂತರ ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಸೈಯ್ಯದ್ ಶಂಸುದ್ದೀನ್ ಬಾಸಿತ್ ಬಾಅಲವಿ ತಂಙಳ್ ಅಲ್ ಅನ್ಸಾರಿ, ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಉಪಾಧ್ಯಕ್ಷರಾದ ಅಶ್ರಫ್ ಕೆ ಇ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಎಸ್ ಎಂ ರಶೀದ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅದ್ದು ಹಾಜಿ, ಮೊಹಮ್ಮದ್ ಅಶ್ರಫ್ ಹಳೆಮನೆ, ಬದ್ರಿಯಾ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಅಝ್ಹರಿಯಾ ದರ್ಸಿನ ಮುದರ್ರಿಸ್ ಹೈದರ್ ಮದನಿ ಅಸಿಸ್ಟೆಂಟ್ ಮುದರ್ರಿಸ್ ಅಬೂಬಕ್ಕರ್ ಮದನಿ ಹಾಗೂ ನೂರಾರು ಉಲಮಾ ಉಮರಾಗಳು ಉಪಸ್ಥಿತರಿದ್ದರು.